ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೂ ಸದ್ಯದಲ್ಲೇ ಕೊಕ್
ಟೀಂ ಇಂಡಿಯಾ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಈಗ ಶುಭಮನ್ ಗಿಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಟಿ20 ತಂಡಕ್ಕೆ ಮಾತ್ರ ಸೂರ್ಯಕುಮಾರ್ ಯಾದವ್ ಅವರೇ ನಾಯಕರಾಗಿ ಮುಂದುವರಿದಿದ್ದಾರೆ. ಕಳೆದ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಿದ್ದರು.
ಆದರೆ ಸೂರ್ಯಕುಮಾರ್ ನಾಯಕತ್ವವೂ ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ ಎಂದು ಹೇಳಲಾಗಿದೆ. ಮುಂಬರುವ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ರನ್ನು ನಾಯಕತ್ವದಿಂದ ಕಿತ್ತು ಹಾಕಿ ಶುಭಮನ್ ಗಿಲ್ ಗೇ ಕಿರು ಮಾದರಿ ನಾಯಕತ್ವವೂ ವಹಿಸಲು ಬಿಸಿಸಿಐ ಮುಂದಾಗಿದೆ.
2026 ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್ ಗೆ ಸೂರ್ಯಕುಮಾರ್ ಯಾದವ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಅದಾದ ಬಳಿಕ ಗಿಲ್ ಗೇ ಟಿ20 ನಾಯಕತ್ವವನ್ನೂ ವಹಿಸಲಾಗುತ್ತದೆ ಎನ್ನಲಾಗಿದೆ.