ದ್ವಿತೀಯ ಟಿ20 ಪಂದ್ಯದಲ್ಲಿ ಕಳಪೆ ಅಂಪಾಯರಿಂಗ್ ಮಾಡಿದ ಅಂಪಾಯರ್ ಗಳ ವಿರುದ್ಧ ದೂರು ನೀಡಲು ಇಂಗ್ಲೆಂಡ್ ನಿರ್ಧಾರ

ಸೋಮವಾರ, 30 ಜನವರಿ 2017 (10:58 IST)
ನಾಗ್ಪುರ: ಭಾರತದ ವಿರುದ್ಧ ದ್ವಿತೀಯ ಟಿ20 ಪಂದ್ಯ ಸೋತ ಹತಾಶೆಯಲ್ಲಿರುವ ಇಂಗ್ಲೆಂಡ್ ತಂಡ ಕಳಪೆ ತೀರ್ಪು ನೀಡಿದ ಅಂಪಾಯರ್ ಗಳ ವಿರುದ್ಧ ದೂರು ನೀಡಲು ಚಿಂತನೆ ನಡೆಸಿದೆ.

 
ಈ ಪಂದ್ಯವನ್ನು ಗೆದ್ದಿದ್ದರೆ ಇಂಗ್ಲೆಂಡ್ ಸರಣಿ ಗೆಲ್ಲುತ್ತಿತ್ತು. ಆದರೆ ಈ ಸರಣಿಯಲ್ಲಿ ಅಂಪಾಯರ್ ಗಳ ಕಳಪೆ ತೀರ್ಪಿನಿಂದಾಗಿ ಹಲವು ತೀರ್ಪುಗಳು ತಮ್ಮ ವಿರುದ್ಧವಾಗಿವೆ ಎಂದು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹತಾಶೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮ್ಯಾಚ್ ರೆಫರಿಗೆ ಅಂಪಾಯರ್ ಗಳ ವಿರುದ್ಧ ಕಳಪೆ ಎಂದು ದೂರು ನೀಡಲು ನಿರ್ಧರಿಸಿದ್ದಾರೆ.

ದ್ವಿತೀಯ ಟಿ20 ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಬ್ಯಾಟ್ ತುದಿಗೆ ಬಾಲ್ ತಗುಲಿದ್ದರೂ ಅಂಪಾಯರ್ ಶಂಸುದ್ದೀನ್ ಎಲ್ ಬಿಡಬ್ಲ್ಯು ತೀರ್ಪು ನೀಡಿರುವುದು ಮಾರ್ಗನ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಒಂದು ತಪ್ಪು ನಿರ್ಧಾರದಿಂದಾಗಿ ನಮ್ಮ ಗೆಲುವಿನ ಅವಕಾಶ ಹಾಳಾಯಿತು ಎನ್ನುವುದು ಅವರ ಆಕ್ರೋಶಕ್ಕೆ ಕಾರಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ