ಮ್ಯಾಚ್ ಗೆ ಮುನ್ನ ಮಹಿಳೆಯರ ಡಿಯೋಡ್ರೆಂಟ್ ಹಾಕಿಕೊಳ್ತಾರಂತೆ ಇಂಗ್ಲೆಂಡ್ ಕ್ರಿಕೆಟಿಗರು!

ಭಾನುವಾರ, 28 ಮಾರ್ಚ್ 2021 (09:42 IST)
ಪುಣೆ: ಟೀಂ ಇಂಡಿಯಾ ವಿರುದ್ಧ ದ್ವಿತೀಯ ಪಂದ್ಯ ಗೆಲುವಿಗೆ ಕಾರಣರಾದ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತಮಾಷೆಯ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

 

ಇಂಗ್ಲೆಂಡ್ ಕ್ರಿಕೆಟಿಗರ ಖಯಾಲಿಯೊಂದನ್ನು ಬೆನ್ ಸ್ಟೋಕ್ಸ್ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ನಾನು ಸೇರಿದಂತೆ ತಂಡದ ಸದಸ್ಯರೆಲ್ಲರೂ ಮ್ಯಾಚ್ ಗೆ ಮುನ್ನ ಮಹಿಳೆಯರ ಡಿಯೋಡ್ರೆಂಟ್ ಹಾಕಿಕೊಂಡು ಮೈದಾನಕ್ಕಿಳಿಯುತ್ತೇವೆ ಎಂದು ಬೆನ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಮೈದಾನದಲ್ಲಿ ಕೆಟ್ಟ ವಾಸನೆ ಬರದೇ ಇರಲು ಮಹಿಳೆಯರ ಡಿಯೋಡ್ರೆಂಟ್ ಹಾಕುತ್ತೇವೆ. ಯಾಕೆಂದರೆ ಇದರ ಪರಿಮಳ ಚೆನ್ನಾಗಿರುತ್ತದೆ. ನನಗಂತೂ ದಾಳಿಂಬೆಯ ಸುವಾಸನೆಯ ಡಿಯೋಡ್ರೆಂಟ್ ಎಂದರೆ ತುಂಬಾ ಇಷ್ಟ ಎಂದು ಬೆನ್ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ