ಟೀಂ ಇಂಡಿಯಾ, ಇಂಗ್ಲೆಂಡ್ ಗೆ ಇಂದು ಫೈನಲ್ ಏಕದಿನ ಪಂದ್ಯ

ಭಾನುವಾರ, 28 ಮಾರ್ಚ್ 2021 (08:59 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದ್ದು, ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಸರಣಿ ಮುಕ್ತಾಯವಾಗಲಿದೆ.


ಎರಡು ಪಂದ್ಯಗಳಿಂದ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿರುವ ಕಾರಣ ಈ ಪಂದ್ಯಕ್ಕೆ ಫೈನಲ್ ಕಳೆ ಬರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದವರಿಗೆ ಹೆಚ್ಚು ಅವಕಾಶವಿದೆ. ಈ ಪಂದ್ಯದಲ್ಲಾದರೂ ಕೊಹ್ಲಿಗೆ ಅದೃಷ್ಟ ಖುಲಾಯಿಸಿ ಟಾಸ್ ಗೆಲ್ಲುವಂತಾಗಲಿ ಎಂದೇ ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.

ಭಾರತ ಈ ಪಂದ್ಯಕ್ಕೆ ಬೌಲರ್ ಗಳ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕುಲದೀಪ್ ಯಾದವ್ ಹೊರಗಿಟ್ಟು ಯಜುವೇಂದ್ರ ಚಾಹಲ್ ಮತ್ತೆ ತಂಡಕ್ಕೆ ವಾಪಸಾಗಬಹುದು. ಅವರ ಹೊರತಾಗಿ ಬೌಲಿಂಗ್ ನಲ್ಲೂ ಹೆಚ್ಚು ಬದಲಾವಣೆಯಾಗುವ ಸಾಧ‍್ಯತೆಯಿಲ್ಲ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ‍್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ