ಟೀಂ ಇಂಡಿಯಾದಲ್ಲಿ ಬದಲಾವಣೆ: ಜಾಫರ್ ನೀಡಿದ ಸಲಹೆ ಸ್ವೀಕರಿಸ್ತಾರಾ ಕೊಹ್ಲಿ?

ಭಾನುವಾರ, 28 ಮಾರ್ಚ್ 2021 (09:10 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯ ಸೋತಿರುವ ಟೀಂ ಇಂಡಿಯಾಗೆ ಈಗ ಅಂತಿಮ ಏಕದಿನ ಗೆಲ್ಲಲೇಬೇಕಾದ ಪರಿಸ್ಥಿತಿ ಬಂದಿದೆ.


ಸರಣಿ ಈಗ 1-1 ರಿಂದ ಸಮಬಲವಾಗಿದ್ದು, ಇಂದು ಎರಡೂ ತಂಡಕ್ಕೆ ಮಾಡು ಇಲ್ಲವೇ ಮಡಿ ಸ್ಥಿತಿ. ಕಳೆದ ಕೆಲವು ದಿನಗಳಿಂದ ತಂಡದ ಆಯ್ಕೆ ವಿಚಾರದಲ್ಲಿ ನಾಯಕ ಕೊಹ್ಲಿ ಟೀಕೆಗೊಳಗಾಗುತ್ತಲೇ ಇದ್ದಾರೆ.

ಈ ನಡುವೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ವಿರಾಟ್ ಕೊಹ್ಲಿಗೆ ತಂಡದಲ್ಲಿ ಕೆಲವು ಬದಲಾವಣೆ ಮಾಡಲು ಸಲಹೆ ನೀಡಿದ್ದಾರೆ. ತಮ್ಮ ಎಂದಿನ ಒಗಟಿನ ಶೈಲಿಯಲ್ಲಿ ಜಾಫರ್ ಕೊಹ್ಲಿಗೆ ಟ್ವಿಟರ್ ಮೂಲಕ ಸಲಹೆ ನೀಡಿದ್ದಾರೆ. ‘ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್ ರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡರೆ ಗೆಲ್ಲಬಹುದು ಎಂದು ಜಾಫರ್ ಒಗಟಿನ ರೂಪದಲ್ಲಿ ಕೊಹ್ಲಿಗೆ ಸುಳಿವು ನೀಡಿದ್ದಾರೆ. ಆದರೆ ಕೊಹ್ಲಿ ಅಂತಿಮವಾಗಿ ತಂಡಕ್ಕೆ ಏನು ಮೇಜರ್ ಸರ್ಜರಿ ಮಾಡಲಿದ್ದಾರೆ ಎಂದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ