ಟೀಂ ಇಂಡಿಯಾ ಕಳಪೆ ತಂಡ: ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್

ಶನಿವಾರ, 30 ಡಿಸೆಂಬರ್ 2023 (09:50 IST)
ಲಂಡನ್: ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋತ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಟೀಕಾಪ್ರಹಾರ ನಡೆಸಿದ್ದಾರೆ.

ಸದಾ ಭಾರತ ತಂಡದ ವಿರುದ್ಧ ಟೀಕೆ ಮಾಡುವ ಮೈಕಲ್ ವಾನ್ ಗೆ ಈಗ ತಕ್ಕ ಅವಕಾಶ ಸಿಕ್ಕಂತಾಗಿದೆ. ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಸೋತ ಬೆನ್ನಲ್ಲೇ ಮೈಕಲ್ ವಾನ್ ಭಾರತ ಅತ್ಯಂತ ಕಳಪೆ ಸಾಧಕ ತಂಡ ಎಂದಿ ಜರೆದಿದ್ದಾರೆ.

ಭಾರತ ತಂಡ ಜಾಗತಿಕ ಕ್ರಿಕೆಟ್ ನ ಅತ್ಯಂತ ಯಶಸ್ವೀ ತಂಡ ಎಂದು ನಿಮಗನಿಸುತ್ತಿದೆಯೇ? ನನಗನಿಸುತ್ತಿಲ್ಲ. ಭಾರತ ಅತ್ಯಂತ ಕಳಪೆ ಸಾಧಕ ತಂಡ. ಆಸ್ಟ್ರೇಲಿಯಾದಲ್ಲಿ ಎರಡು ಸರಣಿ ಗೆದ್ದಿದ್ದು ಬಿಟ್ಟರೆ ಅಷ್ಟೆಲ್ಲಾ ಪ್ರತಿಭಾವಂತರನ್ನು ಹೊಂದಿರುವ ಭಾರತ ತಂಡದ ಸಾಧನೆ ಏನು? ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಸೇರಿದಂತೆ ಎಲ್ಲಾ ಟೂರ್ನಿಗಳಲ್ಲಿ ಮುಗ್ಗರಿಸಿದೆ. ದ.ಆಫ್ರಿಕಾದಂತಹ ಮಹತ್ವದ ತಂಡದ ವಿರುದ್ಧ ಇಂತಹ ಪ್ರದರ್ಶನ ನೀಡುತ್ತಾರೆ. ನನಗೆ ಅನಿಸುವ ಪ್ರಕಾರ ಅಷ್ಟೆಲ್ಲಾ ಸಂಪನ್ಮೂಲ, ಪ್ರತಿಭೆ ಎಲ್ಲಾ ಇದ್ದು ಭಾರತ ಕಳಪೆ ತಂಡ’ ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲೂ ಅನೇಕ ಬಾರಿ ಮೈಕಲ್ ವಾನ್ ಭಾರತ ತಂಡವನ್ನು ಟೀಕಿಸಿದ್ದು ಇದೆ. ಆದರೆ ಹಲವು ಬಾರಿ ಅವರಿಗೇ ಅದು ತಿರುಗುಬಾಣವಾಗಿದ್ದೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ