ಇಂಗ್ಲೆಂಡ್‌ಗೆ ಕಾಡಿದೆ ಯಾಸಿರ್ ಶಾಹ್ ಬೌಲಿಂಗ್ ಭಯ: 16 ರನ್‌ಗಳಿಗೆ ನೋಲಾಸ್

ಶುಕ್ರವಾರ, 22 ಜುಲೈ 2016 (15:53 IST)
ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಓಲ್ಡ್ ಟ್ರಾಫರ್ಡ್‌ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಾಲ್ಕು ಟೆಸ್ಟ್ ಸರಣಿಯಲ್ಲಿ ತಿರುಗೇಟು ನೀಡಲು ಹವಣಿಸಿದೆ. ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ 4 ಓವರುಗಳನ್ನು ಆಡಿ 16 ರನ್‌ಗಳಿಗೆ ನೋಲಾಸ್ ಆಗಿದೆ. ನಾಯಕ ಅಲಸ್ಟೈರ್ ಕುಕ್ 10 ರನ್‌ಗಳಿಂದ ಅಜೇಯರಾಗಿ ಉಳಿದಿದ್ದು, ಅಲೆಕ್ಸ್ ಹೇಲ್ಸ್ 6 ರನ್ ಗಳಿಸಿದ್ದಾರೆ.

ಯಾಸಿರ್ ಶಾಹ್ ಬೌಲಿಂಗ್‌ಗೆ ಇಳಿದ ಮೇಲೆಯೇ ಇಂಗ್ಲೆಂಡ್ ನಿಜವಾದ ಬಂಡವಾಳ ಗೊತ್ತಾಗಲಿದೆ.  ಕಳೆದ ಟೆಸ್ಟ್‌ನಲ್ಲಿ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾಹ್ 10 ವಿಕೆಟ್ ಕಬಳಿಸಿ ತಮ್ಮ ತಂಡದ 75 ರನ್ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದರು.  ಈ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಇಂಗ್ಲೆಂಡ್ ಸಂಕಲ್ಪಿಸಿದೆ.

ಯಾಸಿರ್ ಶಾಹ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಮೈಚಳಿ ಹುಟ್ಟಿಸಿದ್ದು, ಎಡಗೈ ವೇಗಿ ಮೊಹಮ್ಮದ್ ಅಮೀರ್ ಕಮ್ ಬ್ಯಾಕ್‌ ಮೂಲಕ ಕ್ರಿಕೆಟ್ ಮೆಕ್ಕಾದಲ್ಲಿ ಎರಡು ವಿಕೆಟ್ ಕಬಳಿಸಿ ಜಯಕ್ಕೆ ನೆರವಾಗಿದ್ದರು. ಇಂಗ್ಲೆಂಡ್ ತಂಡವು ಜೇಮ್ಸ್ ಆಂಡರ್‌ಸನ್ ಮತ್ತು ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಲೆಗ್ ಸ್ಪಿನ್ನರ್ ಅದಿಲ್ ರಷೀದ್ ಅವರನ್ನು ಎರಡನೇ ಟೆಸ್ಟ್‌ಗೆ ಕರೆತಂದಿದೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ