ಯೂರೊ 2016: ರೊಮಾನಿಯಾ ವಿರುದ್ಧ ಆಲ್ಬಾನಿಯಾ ಐತಿಹಾಸಿಕ ಜಯ

ಸೋಮವಾರ, 20 ಜೂನ್ 2016 (16:17 IST)
ಯೂರೊ 2016 ಆತಿಥೇಯ ರಾಷ್ಟ್ರ ಫ್ರಾನ್ಸ್ ಗ್ರೂಪ್‌ ಎನಲ್ಲಿ ಸ್ವಿಜರ್‌ಲೆಂಡ್ ವಿರುದ್ಧ ಗೋಲುರಹಿತ ಡ್ರಾ ಮಾಡಿಕೊಳ್ಳುವ ಮೂಲಕ ಅಗ್ರಸ್ಥಾನಕ್ಕೆ ಮುಟ್ಟಿದ್ದು, ಅವರ ಎದುರಾಳಿ ತಂಡ ಸ್ವಿಜರ್‌ಲೆಂಡ್ ಕೂಡ ನಾಕ್‌ಔಟ್ ಹಂತಕ್ಕೆ ತಲುಪಿದೆ.
 
ಏತನ್ಮಧ್ಯೆ, ಅಲ್ಬಾನಿಯಾ ಪ್ರಮುಖ ಪಂದ್ಯಾವಳಿಯಲ್ಲಿ ಐತಿಹಾಸಿಕ ಮೊದಲ ಜಯವನ್ನು ದಾಖಲಿಸಿದ್ದು, ರೊಮಾನಿಯಾವನ್ನು 1-0ಯಿಂದ ಸೋಲಿಸಿದೆ. ಆರ್ಮಾಂಡೊ ಸಾಡಿಕು ಅವರ ಏಕಮಾತ್ರ ಗೋಲಿನಿಂದ ಈ ಜಯ ಸಾಧ್ಯವಾಗಿದೆ.

ಬಾಲ್ಕನ್ ಕ್ರೀಡಾಪಟುಗಳು ಶ್ರೇಷ್ಟ ಮೂರನೇ ಸ್ಥಾನದ ತಂಡವಾಗಿ ಪ್ರಗತಿ ಸಾಧಿಸುತ್ತಾರೆಯೇ ಎಂದು ಕಾದುನೋಡಬೇಕು.
ದೀದಿಯರ್ ದೆಸ್‌ಚಾಂಪ್ಸ್ ಫ್ರಾನ್ಸ್ ತಂಡವು ಮುಂದಿನ ಸುತ್ತಿನಲ್ಲಿ ಸುಲಭದ ಡ್ರಾಗಾಗಿ ಎದುರುನೋಡುತ್ತಿದೆ. ಸ್ವಿಸ್ ತಂಡವು ಐರೋಪ್ಯ ಚಾಂಪಿಯನ್‌ಷಿಪ್‌ನಲ್ಲಿ ನಾಕ್‌ಔಟ್ ಹಂತಕ್ಕೆ ಮೊದಲ ಬಾರಿ ಪ್ರವೇಶಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ