ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯದ ನಡುವೆ ಪಿಚ್ ಗೆ ನುಗ್ಗಿದ ಇನ್ ವೇಡರ್ ಜಾರ್ವೊ

ಭಾನುವಾರ, 8 ಅಕ್ಟೋಬರ್ 2023 (16:57 IST)
Photo Courtesy: Twitter
ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದ ನಡುವೆ ಚೆನ್ನೈ ಚಿದಂಬರಂ ಸ್ಟೇಡಿಯಂಗೆ ಪಿಚ್ ಇನ್ ವೇಡರ್ ಖ್ಯಾತಿಯ ಜಾರ್ವೊ ಆಗಮನವಾಗಿದೆ!

ಇಂಗ್ಲೆಂಡ್ ಮೂಲದ ಪಿಚ್ ಇನ್ ವೇಡರ್ ಜಾರ್ವೊ ಹಲವು ಬಾರಿ ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿ ನೆಚ್ಚಿನ ಆಟಗಾರನನ್ನು ಭೇಟಿಯಾಗಿ ಮೈದಾನದಿಂದ ಹೊರದಬ್ಬಿಸಿಕೊಂಡ ಉದಾಹರಣೆಗಳಿವೆ.

ಈ ವ್ಯಕ್ತಿ ಈಗ ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಭಾರತೀಯ ಜೆರ್ಸಿ ತೊಟ್ಟು ನೇರವಾಗಿ ಮೈದಾನಕ್ಕೆ ನುಗ್ಗಿದ್ದಾನೆ. ಬಳಿಕ ಕೊಹ್ಲಿ ಜೊತೆ ಮಾತುಕತೆಯನ್ನೂ ಮಾಡಿದ್ದಾನೆ. ಬಳಿಕ ಆತನನ್ನು ಮೈದಾನದಿಂದ ಹೊರಕಳುಹಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ