ಹೀಗಾಗಿ ಈಗ ದ್ರಾವಿಡ್ ರನ್ನು ಸೆಳೆಯಲು ಐಪಿಎಲ್ ಫ್ರಾಂಚೈಸಿಗಳು ಪೈಪೋಟಿಗೆ ಬೀಳಲಿವೆ. ಫೈನಲ್ ಪಂದ್ಯ ಮುಗಿದ ಬಳಿಕ ದ್ರಾವಿಡ್ ತಮಾಷೆಯಾಗಿ ಮುಂದಿನ ವಾರದಿಂದ ನಾನು ನಿರುದ್ಯೋಗಿ ಎಂದಿದ್ದರು. ಈ ನಡುವೆ ಕನ್ನಡಿಗ ಅಭಿಮಾನಿಗಳು ದ್ರಾವಿಡ್ ಸರ್ ಇನ್ನಾದ್ರೂ ನಮ್ಮ ಆರ್ ಸಿಬಿಗೆ ಕೋಚ್ ಆಗಿ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ. ಆರ್ ಸಿಬಿ ಇದುವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ. ದ್ರಾವಿಡ್ ರಂತಹ ಅನುಭವಿಯ ಮಾರ್ಗದರ್ಶನವಿದ್ದರೆ ತಂಡ ಗೆಲ್ಲಬಹುದು ಎಂಬುದು ಅಭಿಮಾನಿಗಳ ಆಸೆ. ಹೀಗಾಗಿ ದ್ರಾವಿಡ್ ರನ್ನು ಆರ್ ಸಿಬಿಗೆ ಆಹ್ವಾನಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ತಮ್ಮ ಭವಿಷ್ಯದ ಯೋಜನೆ ಏನು ಎಂಬುದನ್ನು ದ್ರಾವಿಡ್ ಹೇಳಿಕೊಂಡಿಲ್ಲ.