ಟೀಂ ಇಂಡಿಯಾ ಟಾಸ್ ಗೆದ್ದ ಕೂಡಲೇ ಮೈದಾನದಲ್ಲಿ ಮೊಳಗಿತು ಹರ್ಷೋದ್ಗಾರ!

ಭಾನುವಾರ, 18 ಜೂನ್ 2017 (14:48 IST)
ಲಂಡನ್: ಎಲ್ಲರೂ ಕಾತುರದಿಂದ ಕಾಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡಿದೆ.

 
ಟೀಂ ಇಂಡಿಯಾ ಟಾಸ್ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ, ಮೈದಾನದಲ್ಲಿದ್ದ ಸಾವಿರಾರು ಮಂದಿ ಖುಷಿಯಿಂದ ಉದ್ಘಾರ ಮಾಡಿದರು. ನಿರೀಕ್ಷೆಯಂತೆ ಭಾರತದ ಚೇಸಿಂಗ್ ಮಾಡಲಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿತ್ತು.

ನಿರೀಕ್ಷೆಯಂತೆ ಉಭಯ ತಂಡಗಳೂ ಸೆಮಿಫೈನಲ್ ನಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದೆ. ಯಾವುದೇ ಬದಲಾವಣೆಯಲ್ಲ. ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಚೇಸಿಂಗ್ ಮಾಡುವುದರಲ್ಲಿ ಎತ್ತಿದ ಕೈ. ಹಾಗಾಗಿ ಮೊದಲು ಫೀಲ್ಟಿಂಗ್ ಆಯ್ದುಕೊಂಡಿರುವುದು ಅಭಿಮಾನಿಗಳಿಗೂ ಖುಷಿ ತಂದಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ