ಪಾಕ್ ಮಾಜಿ ನಾಯಕ, ಲಿಟರ್ ಮಾಸ್ಟರ್ ಹನೀಫ್ ಮೊಹ್ಮದ್ ಪರಿಸ್ಥಿತಿ ಚಿಂತಾಜನಕ

ಮಂಗಳವಾರ, 9 ಆಗಸ್ಟ್ 2016 (13:16 IST)
ಪಾಕಿಸ್ತಾನದ ಮಾಜಿ ನಾಯಕ ಹನೀಫ್ ಮೊಹಮ್ಮದ್ ಸಾವು ಬದುಕಿನ ಹೋರಾಟ ನಡೆಸಿದ್ದು, ಕರಾಚಿಯ ಆಗಾಖಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ವ್ಯವಸ್ಥೆಯನ್ನು ಅವರಿಗೆ ಅಳವಡಿಸಲಾಗಿದೆ.

ಉಸಿರಾಟದ ಸಮಸ್ಯೆಗಳಿಂದ ಕಳೆದ ತಿಂಗಳಿಂದ ಅವರು ಆಸ್ಪತ್ರೆಯಲ್ಲಿದ್ದು, ಈ ಕುರಿತು ಅವರ ಪುತ್ರ, ಟೆಸ್ಟ್ ಆಟಗಾರ ಶೋಯಬ್ ಮೊಹಮ್ಮದ್ ಪ್ರತಿಕ್ರಿಯಿಸುತ್ತಾ, ಭಾನುವಾರದಿಂದ ತಮ್ಮ ತಂದೆಯ ಸ್ಥಿತಿ ಹದಗೆಟ್ಟಿರುವುದಾಗಿ ತಿಳಿಸಿದರು.
 
 ಶ್ವಾಸಕೋಶದ ಕ್ಯಾನ್ಸರ್ ದೆಸೆಯಿಂದ ಅವರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಅವರು ಹೇಳಿದರು. ತಮ್ಮ ಬ್ಯಾಟಿಂಗ್ ಕೌಶಲ್ಯಕ್ಕಾಗಿ ಲಿಟರ್ ಮಾಸ್ಟರ್ ಎಂದೇ ಹೆಸರಾಗಿದ್ದ 81 ವರ್ಷದ ಹನೀಫ್ ಅವರಿಗೆ 2013ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇರುವುದನ್ನು ಪತ್ತೆಹಚ್ಚಲಾಯಿತು ಮತ್ತು ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಗೆ ಲಂಡನ್‌ಗೆ ತೆರಳಿ ಮನೆಗೆ ವಾಪಸಾಗಿದ್ದರು. ಆದರೆ ಕ್ಯಾನ್ಸರ್ ಕಾಲಾಂತರದಲ್ಲಿ ದೇಹದಲ್ಲಿ ಹರಡಿತು ಎಂದು ಶೋಯಬ್ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ