ಗೌತಮ್ ಗಂಭೀರ್ ಮನವಿಗೆ ಇನ್ನೂ ಪ್ರತಿಕ್ರಿಯೆ ನೀಡದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ

Krishnaveni K

ಬುಧವಾರ, 17 ಜುಲೈ 2024 (09:25 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಭಾರತದ ಮೂವರು ಹಿರಿಯ ಆಟಗಾರರಿಗೆ ಮನವಿಯೊಂದನ್ನು ಮಾಡಿದ್ದಾರೆ. ಆದರೆ ಇದಕ್ಕೆ ಮೂವರೂ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಅಂತಹ ಮನವಿ ಏನು ಇಲ್ಲಿದೆ ಡೀಟೈಲ್ಸ್.

ಗೌತಮ್ ಗಂಭೀರ್ ಗೆ ಟೀಂ ಇಂಡಿಯಾ ಕೋಚ್ ಆಗಿ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಪ್ರವಾಸವಾಗಲಿದೆ. ಈ ಹುದ್ದೆ ನಿಭಾಯಿಸಲು ಅವರೂ ಉತ್ಸುಕರಾಗಿದ್ದಾರೆ. ಲಂಕಾದಲ್ಲಿ ಈ ಜುಲೈ ಕೊನೆಯ ವಾರದಿಂದ ಆಗಸ್ಟ್ ಮೊದಲ ವಾರದವರೆಗೆ ಭಾರತ ಟಿ20 ಮತ್ತು ಏಕದಿನ ಸರಣಿಗಳನ್ನು ಆಡಲಿದೆ.

ಟಿ20 ಕ್ರಿಕೆಟ್ ನಿಂದ ಕೊಹ್ಲಿ, ರೋಹಿತ್ ಈಗಾಗಲೇ ನಿವೃತ್ತರಾಗಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಏಕದಿನ ಸರಣಿಗೆ ಹಾರ್ದಿಕ್ ವೈಯಕ್ತಿಕ ಕಾರಣಗಳಿಂದ ಅಲಭ್ಯರಾಗಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರಂತೆ. ಇತ್ತ ರೋಹಿತ್, ಕೊಹ್ಲಿ, ಬುಮ್ರಾ ಕೂಡಾ ನಮಗೆ ದೀರ್ಘ ಬ್ರೇಕ್ ಬೇಕು. ಹೀಗಾಗಿ ಲಂಕಾ ಏಕದಿನ ಸರಣಿಗೆ ಪರಿಗಣಿಸಬೇಡಿ ಎಂದಿದ್ದರು.

ಆದರೆ ಗೌತಮ್ ಗಂಭೀರ್ ಈ ಮೂವರೂ ಹಿರಿಯ ಆಟಗಾರರನ್ನು ಲಂಕಾ ಸರಣಿಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರಂತೆ. ಆದರೆ ಇದಕ್ಕೆ ಇನ್ನೂ ಈ ಮೂವರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ. ಸದ್ಯಕ್ಕೆ ಮೂವರೂ ಕ್ರಿಕೆಟಿಗರು ತಮ್ಮ ಕುಟುಂಬದ ಜೊತೆ ಬೇರೆ ಬೇರೆ ತಾಣದಲ್ಲಿ ಟೂರ್ ನಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ