ಅಭಿಮಾನಿಗಳಲ್ಲಿದ್ದ ಆ ಒಂದು ಆತಂಕ ನಿವಾರಿಸಿದ ರೋಹಿತ್ ಶರ್ಮಾ: ವಿಡಿಯೋ ಇಲ್ಲಿದೆ

Krishnaveni K

ಸೋಮವಾರ, 15 ಜುಲೈ 2024 (11:29 IST)
ಅಮೆರಿಕಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಿಂದಲೂ ನಿವೃತ್ತಿ ಪಡೆಯುವ ಬಗ್ಗೆ ನೀಡಿರುವ ಸ್ಪಷ್ಟನೆ ಈಗ ವೈರಲ್ ಆಗಿದೆ. ಅಮೆರಿಕಾದಲ್ಲಿ ಪ್ರಮೋಷನಲ್ ಕಾರ್ಯಕ್ರಮವೊಂದರಲ್ಲಿ ರೋಹಿತ್ ನಿವೃತ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ  ಬಳಿಕ ರೋಹಿತ್ ಶರ್ಮಾ ಇದು ನನ್ನ ಕೊನೆಯ ಟಿ20 ಎಂದು ಕಿರು ಮಾದರಿಯಿಂದ ನಿವೃತ್ತಿ ಪಡೆದಿದ್ದರು. ವಿರಾಟ್ ಕೊಹ್ಲಿ ಬೆನ್ನಲ್ಲೇ ರೋಹಿತ್ ಕೂಡಾ ಟಿ20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. 37 ವರ್ಷದ ರೋಹಿತ್ ಈಗ ಏಕದಿನ ಮಾದರಿಯಿಂದಲೂ ನಿವೃತ್ತಿಯಾಗುವ ಬಗ್ಗೆ ಚರ್ಚೆಗಳಾಗುತ್ತಿವೆ.

ಈ ಬಗ್ಗೆ ಅವರನ್ನು ಕಾರ್ಯಕ್ರಮದಲ್ಲಿ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು ‘ಸದ್ಯಕ್ಕೆ ನಾನು ಅಷ್ಟು ದೂರ ಯೋಚಿಸುತ್ತಿಲ್ಲ. ಕೆಲವು ಸಮಯ ನಾನು ಆಡುವುದನ್ನು ನೀವು ನೋಡಬಹುದು’ ಎಂದಿದ್ದಾರೆ. ಆ ಮೂಲಕ ಸದ್ಯಕ್ಕೆ ನಿವೃತ್ತಿಯ ಯೋಜನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟೀಂ ಇಂಡಿಯಾಗೆ ಈಗ ಹೊಸ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಭಾರತ ಮುಂದೆ ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡುವ ನಿರೀಕ್ಷೆಯಲ್ಲಿದೆ. ಈ ಎಲ್ಲಾ ಮಹತ್ವದ ಸರಣಿಗೆ ರೋಹಿತ್ ರಂತಹ ಅನುಭವಿ ನಾಯಕರ ಅಗತ್ಯ ಭಾರತ ತಂಡಕ್ಕಿದೆ. ಹೀಗಾಗಿ ರೋಹಿತ್ ಸದ್ಯಕ್ಕೆ ನಿವೃತ್ತಿ ಘೋಷಿಸುತ್ತಿಲ್ಲ ಎನ್ನುವುದು ಅಭಿಮಾನಿಗಳ ಪಾಲಿಗೆ ಖುಷಿಯ ಸಂಗತಿಯಾಗಿದೆ.


At least you will see me playing for a while! Says Rohit Sharma in Dallas. pic.twitter.com/wADSJZj6b5

— Vimal कुमार (@Vimalwa) July 14, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ