ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗಂಭೀರ್ ಪಾಲಿಗೆ ಡೆಡ್ ಲೈನ್ ಆಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕು. ಇಲ್ಲದೇ ಇದ್ದರೆ ಅದೇ ಕೊನೆ ಸರಣಿಯಾಗಲಿದೆ ಎಂದು ಗೌತಮ್ ಗಂಭೀರ್ ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಐಪಿಎಲ್ ನಲ್ಲಿ ಸಕ್ಸಸ್ ಬಳಿಕ ಭಾರೀ ನಿರೀಕ್ಷೆಯೊಂದಿಗೆ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಗಂಭೀರ್ ರನ್ನು ಕರೆತರಲಾಗಿತ್ತು. ಅವರು ಕೇಳಿದ ಸಹಾಯಕ ಸಿಬ್ಬಂದಿ, ಸೌಲಭ್ಯಗಳೆಲ್ಲವನ್ನೂ ನೀಡಲಾಗಿತ್ತು.
ಹಾಗಿದ್ದರೂ ಭಾರತ ಇದುವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಒಂದು ವೇಳೆ ಆಸ್ಟ್ರೇಲಿಯಾ ಸರಣಿಯಲ್ಲೂ ವಿಫಲರಾದರೆ ಗಂಭೀರ್ ತಮ್ಮ ಗುತ್ತಿಗೆ ಅವಧಿ ಮುಗಿಯುವವರೆಗೂ ಕೇವಲ ಟಿ20, ಏಕದಿನ ಮಾದರಿಗೆ ಮಾತ್ರ ನಾಯಕರಾಗಿ ಮುಂದುವರಿಯಲಿದ್ದಾರೆ. ಟೆಸ್ಟ್ ಮಾದರಿಗೆ ಬಿಸಿಸಿಐ ಹೊಸ ಕೋಚ್ ನೇಮಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.