ಲಕ್ನೋಗೆ ಗುಡ್ ಬೈ: ಕೆಕೆಆರ್ ತಂಡಕ್ಕೆ ಕಮ್ ಬ್ಯಾಕ್ ಮಾಡಲಿರುವ ಗೌತಮ್ ಗಂಭೀರ್?
ಕಳೆದ ಋತುವಿನಲ್ಲಿ ಲಕ್ನೋ ತಂಡದ ಮೆಂಟರ್ ಆಗಿ ಗಂಭೀರ್ ಅನೇಕ ವಿವಾದಗಳಿಗೆ ಗುರಿಯಾಗಿದ್ದರು. ಕೊಹ್ಲಿ ಜೊತೆಗಿನ ವಾಗ್ವಾದ ಇದರಲ್ಲಿ ಪ್ರಮುಖವಾಗಿತ್ತು. ಈ ಕಾರಣಕ್ಕೆ ಲಕ್ನೋ ಮ್ಯಾನೇಜೆಮೆಂಟ್ ಗಂಭೀರ್ ರನ್ನು ಮುಂದಿನ ಋತುವಿಗೆ ತಂಡದಲ್ಲಿ ಉಳಿಸಿಕೊಳ್ಳುವುದು ಅನುಮಾನ ಎನ್ನಲಾಗಿತ್ತು.
ಆದರೆ ಈಗ ಸ್ವತಃ ಗಂಭೀರ್ ಲಕ್ನೋ ತಂಡದಿಂದ ಹೊರಬರಲು ಚಿಂತನೆ ನಡೆಸಿದ್ದಾರಂತೆ. ಈಗಾಗಲೇ ಅವರು ಈ ಹಿಂದೆ ನಾಯಕರಾಗಿದ್ದ ಕೆಕೆಆರ್ ತಂಡದ ಜೊತೆ ಮಾತುಕತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಮಾತುಕತೆ ಫಲಪ್ರದವಾದರೆ ಮುಂದಿನ ಋತುವಿನಿಂದ ಮತ್ತೆ ಅವರು ಕೆಕೆಆರ್ ತಂಡದಲ್ಲಿರಲಿದ್ದಾರೆ.