ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಬಾಲ್ ವಿರೂಪ ಪ್ರಕರಣದ ಹಿಂದಿದೆ ಬೇರೆಯದೇ ರಹಸ್ಯ ಸಂಚು?!
ಶುಕ್ರವಾರ, 30 ಮಾರ್ಚ್ 2018 (09:18 IST)
ನವದೆಹಲಿ: ಬಾಲ್ ವಿರೂಪ ಪಕ್ರರಣದಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್, ಕೆಮರೂನ್ ಬ್ಯಾನ್ ಕ್ರಾಫ್ಟ್ ತಲೆದಂಡವಾಗಿದೆ. ಆದರೆ ಈ ಪ್ರಕರಣದ ಹಿಂದೆ ಸಂಚು ಅಡಗಿದೆಯೇ? ಹೀಗೊಂದು ಅನುಮಾನವನ್ನು ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ವ್ಯಕ್ತಪಡಿಸಿದ್ದಾರೆ.
ಸದಾ ನೇರ ಮಾತುಗಳಿಗೆ ಜನ ಜನಿತವಾಗಿರುವ ಗಂಭೀರ್, ಸ್ಮಿತ್ ಮತ್ತು ವಾರ್ನರ್, ಹಿಂದೆ ವೇತನ ಹೆಚ್ಚಳಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೊಂದಿಗೆ ಹಗ್ಗ ಜಗ್ಗಾಟ ನಡೆಸಿದ್ದರು. ಅದರ ಪರಿಣಾಮವೇ ಇದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾಯಕ ಮತ್ತು ಉಪನಾಯಕನ ಮೇಲೆ ವಿಧಿಸಿದ ಶಿಕ್ಷೆ ನಿಜಕ್ಕೂ ತೀರಾ ಕಠಿಣವಾದದ್ದು. ಇದು ವೇತನ ಹೆಚ್ಚಳಕ್ಕಾಗಿ ಈ ಕ್ರಿಕೆಟಿಗರು ನಡೆಸಿದ ಹೋರಾಟಕ್ಕೆ ಸಿಕ್ಕ ಶಿಕ್ಷೆಯೇ ಎಂದು ಗಂಭೀರ್ ಪ್ರಶ್ನಿಸಿದ್ದಾರೆ. ‘ಇಲ್ಲಿ ಆಟಗಾರರ ಪರವಾಗಿ ಹೋರಾಡಿದವರ ಮೇಲೆ ದಬ್ಬಾಳಿಕೆ ನಡೆಸಿದ ಇತಿಹಾಸವೇ ಇದೆ. ಅದಕ್ಕೆ ಉತ್ತಮ ಉದಾಹರಣೆ ಇಯಾನ್ ಚಾಪೆಲ್. ಸ್ಮಿತ್, ವಾರ್ನರ್ ಮೇಲೆ ಆಗಿರುವುದೂ ಇದುವೇ. ವೇತನ ಹೆಚ್ಚಳಕ್ಕೆ ಬೇಡಿಕೆಯಿಟ್ಟಿದ್ದಕ್ಕೆ ಇದು ಶಿಕ್ಷೆಯೇ?’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ