ವಾಟ್ಸನ್, ಇಕ್ಬಾಲ್ ಅಬ್ದುಲಾ ಮಾರಕ ಬೌಲಿಂಗ್ ದಾಳಿ: ಗುಜರಾತ್ ಲಯನ್ಸ್ 158ಕ್ಕೆ ಆಲೌಟ್

ಮಂಗಳವಾರ, 24 ಮೇ 2016 (21:38 IST)
ಗುಜರಾತ್ ಲಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೌಲಿಂಗ್ ದಾಳಿಗೆ ಗುಜರಾತ್ 160 ರನ್ ಗಳಿಸಲು ಶಕ್ತವಾಗಿದೆ.  2ನೇ ಓವರಿನಲ್ಲಿ ಇಕ್ಬಾಲ್ ಅಬ್ದುಲ್ಲಾ ಅವರ ಮೊದಲ ಎಸೆತದಲ್ಲೇ ಬ್ರೆಂಡನ್ ಮೆಕಲಮ್ ಡಿವಿಲಿಯರ್ಸ್‌ಗೆ ಕ್ಯಾಚಿತ್ತು ಔಟಾದರು.

4ನೇ ಎಸೆತದಲ್ಲಿ ಫಿಂಚ್ ಸ್ಲಿಪ್‌ನಲ್ಲಿ ನಿಂತಿದ್ದ ಕ್ರಿಸ್ ಗೇಲ್‌ಗೆ ಕ್ಯಾಚಿತ್ತು ಔಟಾದರು.  4ನೇ ಓವರಿನಲ್ಲಿ ಸುರೇಶ್ ರೈನಾ ವಾಟ್ಸನ್ ಬೌಲಿಂಗ್‌ನಲ್ಲಿ ಅರವಿಂದ್‌ಗೆ ಕ್ಯಾಚಿತ್ತು ಔಟಾದಾಗ   ಗುಜರಾತ್ ಲಯನ್ಸ್ 9 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಬಳಿಕ ಡ್ವೇನ್ ಸ್ಮಿತ್ ಮತ್ತು ದಿನೇಶ್ ಕಾರ್ತಿಕ್ ಅವರ ಉತ್ತಮ ಜತೆಯಾಟದಿಂದ 3 ವಿಕೆಟ್ ಕಳೆದುಕೊಂಡು 88 ರನ್ ಮಾಡಿತ್ತು.

 ಡ್ವೇನ್ ಸ್ಮಿತ್ 41 ಎಸೆತಗಳಲ್ಲಿ ಬಿರುಸಿನ 76 ರನ್ ಸಿಡಿಸಿದರು. ಕಾರ್ತಿಕ್ 26 ರನ್ ಗಳಿಸಿ ಜೋರ್ಡಾನ್‌ಗೆ ಬೌಲ್ಡ್ ಆದರು. ಇಕ್ಬಾಲ್ ಅಬ್ದುಲ್ಲಾ 2 ವಿಕೆಟ್ ಮತ್ತು ಜೋರ್ಡಾನ್ 1 ಹಾಗೂ ವಾಟ್ಸನ್ 3 ವಿಕೆಟ್ ಕಬಳಿಸಿದ್ದಾರೆ. ಡ್ವೇನ್ ಸ್ಮಿತ್ ಔಟಾದ ಬಳಿಕ ದ್ವಿವೇದಿ ಬಿರುಸಿನ ಸ್ಕೋರ್ ಮಾಡಿ 19 ರನ್ ಗಳಿಸಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ