ಹರ್ಭಜನ್ ಸಿಂಗ್ ಗೆ ಕೈತಪ್ಪಿದ ಖೇಲ್ ರತ್ನ ಪ್ರಶಸ್ತಿ

ಗುರುವಾರ, 25 ಜುಲೈ 2019 (09:39 IST)
ನವದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ ಸಿಗಬೇಕಿದ್ದ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಕೈತಪ್ಪಿ ಹೋಗಿದೆ.


ಈ ಬಾರಿ ಅರ್ಜುನ ಪ್ರಶಸ್ತಿಗೆ ಕ್ರಿಕೆಟಿಗರಾದ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹೆಸರುಗಳನ್ನು ಬಿಸಿಸಿಐ ಶಿಫಾರಸ್ಸು ಮಾಡಿತ್ತು. ಪಂಜಾಬ್ ಸರ್ಕಾರ ಹರ್ಭಜನ್ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.  

ಆದರೆ ಕೊನೆ ಗಳಿಗೆಯಲ್ಲಿ ಮೂರು ಹೆಸರುಗಳನ್ನು ಮಾತ್ರ ಕೊಡಲು ಕ್ರೀಡಾ ಸಚಿವಾಲಯ ಸೂಚಿಸಿತ್ತು. ಹೀಗಾಗಿ ಹರ್ಭಜನ್ ಬಿಟ್ಟು ಉಳಿದೆಲ್ಲಾ ಹೆಸರುಗಳು ಪ್ರಶಸ್ತಿಗೆ ಶಿಫಾರಸ್ಸುಗೊಂಡಿವೆ. ಇದೇ ರೀತಿ ಓಟಗಾರ್ತಿ ದ್ಯುತಿ ಚಾಂದ್ ಹೆಸರೂ ಕೂಡಾ ಅರ್ಜುನ ಪ್ರಶಸ್ತಿ ಶಿಫಾರಸ್ಸಿನಿಂದ ಹೊರಬಿದ್ದಿದೆ. ದ್ಯುತಿ ಹೆಸರು ನಿಗದಿತ ದಿನಾಂಕ ಕಳೆದ ಮೇಲೆ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ದ್ಯುತಿ ಹೆಸರನ್ನು ಕೈಬಿಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ