RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು
ಕೆಲವು ದಿನಗಳ ಹಿಂದೆ ಯಶ್ ದಯಾಳ್ ವಿರುದ್ಧ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಉತ್ತರ ಪ್ರದೇಶ ಮೂಲದ ಯುವತಿ ದಯಾಳ್ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ.
ಆಗಲೇ ದಯಾಳ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. 2025 ರ ಐಪಿಎಲ್ ಟೂರ್ನಿ ವೇಳೆ ಜೈಪುರದಲ್ಲಿ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕ್ರಿಕೆಟ್ ಅವಕಾಶ ನೀಡುವುದಾಗಿ 17 ವರ್ಷದ ಯುವತಿಯನ್ನು ನಂಬಿಸಿ ದಯಾಳ್ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಕೆಲವೇ ದಿನಗಳ ಅಂತರದಲ್ಲಿ ದಯಾಳ್ ವಿರುದ್ಧ ದಾಖಲಾದ ಎರಡನೇ ಆರೋಪ ಇದಾಗಿದೆ.