ವಿಂಡೀಸ್ ತಂಡದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ ಹರ್ಭಜನ್ ಸಿಂಗ್

ಭಾನುವಾರ, 7 ಅಕ್ಟೋಬರ್ 2018 (07:45 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಸ್ವಲ್ಪವೂ ಪ್ರತಿರೋಧ ತೋರದ ಪ್ರವಾಸಿ ತಂಡದ ಗುಣಮಟ್ಟದ ಬಗ್ಗೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

ಪ್ರವಾಸಿ ತಂಡದ ಆಟದ ಗುಣಮಟ್ಟ ನೋಡಿ ಈ ತಂಡ ರಣಜಿ ಆಡಲೂ ಲಾಯಕ್ಕೇ ಎಂದು ಪ್ರಶ್ನೆ ಮಾಡಿದೆ. ವಿಂಡೀಸ್ ಕೇವಲ ಸರಿ ಸುಮಾರು ಒಂದು ದಿನದ ಆಟದಲ್ಲಿ ಎರಡು ಬಾರಿ ಆಲೌಟ್ ಆಗಿದ್ದಕ್ಕೆ ಭಜಿ ಈ ರೀತಿ ಪ್ರಶ್ನೆ ಮಾಡಿದ್ದಾರೆ.

‘ವಿಂಡೀಸ್ ಕ್ರಿಕೆಟ್ ಮೇಲೆ ಗೌರವದಿಂದಲೇ ಈ ಪ್ರಶ್ನೆ ಮಾಡುತ್ತಿದ್ದೇನೆ. ಈ ವಿಂಡೀಸ್ ತಂಡ ರಣಜಿ ಕ್ವಾರ್ಟರ್ ಪಂದ್ಯವನ್ನಾದರೂ ಅರ್ಹತೆ ಪಡೆಯಬಹುದೇ? ಎಲೈಟ್ ಗ್ರೂಪ್ ನಲ್ಲೂ ಸಾಧ‍್ಯವಿಲ್ಲ’ ಎಂದು ಭಜಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ