ಉಳಿದವರು ಲಸ್ಸಿ ಕುಡಿಯಕ್ಕೆ ಹೋಗಿದ್ರಾ? ಧೋನಿಗೆ ಟಾಂಗ್ ಕೊಟ್ಟ ಹರ್ಭಜನ್

ಬುಧವಾರ, 13 ಏಪ್ರಿಲ್ 2022 (10:25 IST)
ಮುಂಬೈ: 2011 ರ ವಿಶ್ವಕಪ್ ಧೋನಿಯಿಂದಾಗಿ ಗೆಲ್ಲಲು ಸಾಧ್ಯವಾಯಿತು ಎಂಬ ಮಾತುಗಳಿಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟಾಂಗ್ ಕೊಟ್ಟಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಭಜಿ 2011 ರ ಏಕದಿನ ವಿಶ್ವಕಪ್ ಗೆಲುವಿಗೆ ಧೋನಿಯೊಬ್ಬರೇ ಕಾರಣ ಎಂಬಂತೆ ಬಿಂಬಿಸುವುದರ ಬಗ್ಗೆ ಕಿಡಿ ಕಾರಿದ್ದಾರೆ.

‘ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಗೆದ್ದಿತು ಅಂತಾರೆ. ಆದರೆ ಭಾರತ ವಿಶ್ವಕಪ್ ಗೆದ್ದರೆ ಧೋನಿ ಗೆದ್ದಿತು ಅಂತಾರೆ. ಹಾಗಿದ್ರೆ ಉಳಿದ 10 ಮಂದಿ ಲಸ್ಸಿ ಕುಡಿಯಕ್ಕೆ ಹೋಗಿದ್ರಾ? ಬಾಕಿ ಉಳಿದವರು ಏನು ಮಾಡಿದರು? ಗೌತಮ್ ಗಂಭೀರ್ ಏನು ಮಾಡಿದರು ಹಾಗಿದ್ರೆ? ಒಂದು ತಂಡದಲ್ಲಿ 7 ರಿಂದ 8 ಆಟಗಾರರು ಉತ್ತಮವಾಗಿ ಆಡಿದರೆ ಮಾತ್ರ ತಂಡ ಗೆಲ್ಲಲು ಸಾಧ‍್ಯ' ಎಂದು ಭಜಿ ಧೋನಿಗೆ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ