ರೋಹಿತ್, ದ್ರಾವಿಡ್ ಬಂದ ಮೇಲೆ ತಂಡದಲ್ಲಾದ ಬದಲಾವಣೆ ಬಗ್ಗೆ ಹೇಳಿಕೊಂಡ ಹಾರ್ದಿಕ್ ಪಾಂಡ್ಯ

ಗುರುವಾರ, 4 ಆಗಸ್ಟ್ 2022 (08:30 IST)
ಸೈಂಟ್ ಕಿಟ್ಸ್: ರೋಹಿತ್ ಶರ್ಮಾ ನಾಯಕರಾಗಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಬಂದ ಮೇಲೆ ತಂಡದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮನಬಿಚ್ಚಿ ಮಾತನಾಡಿದ್ದಾರೆ.

ದ್ರಾವಿಡ್-ರೋಹಿತ್ ಕಾಲದಲ್ಲಿ ಅತಿಯಾದ ಪ್ರಯೋಗಗಳ ಬಗ್ಗೆ ಹಲವರು ಟೀಕೆ ಮಾಡುತ್ತಿರಬಹುದು. ಆದರೆ ಹಾರ್ದಿಕ್ ಮಾತ್ರ ತಂಡದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂದಿದ್ದಾರೆ.

‘ಸೂರ್ಯಕುಮಾರ್ ಯಾದವ್ ವಿಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಆಡಿದ ಇನಿಂಗ್ಸ್ ಗೆ ರೋಹಿತ್, ದ್ರಾವಿಡ್ ಅವರ ಸಕಾರಾತ್ಮಕ ಮನೋಭಾವವೇ ಕಾರಣ. ತಂಡದಲ್ಲಿ ಈಗ ಆಟಗಾರರಿಗೆ ಸುರಕ್ಷಿತ ಭಾವವಿದೆ. ಆಟಗಾರರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಒಂದು ವೇಳೆ ತಂಡದಿಂದ ಕೈ ಬಿಟ್ಟರೂ ಸರಿಯಾದ ಕಾರಣ, ವಿವರಣೆ ನೀಡಲಾಗುತ್ತದೆ. ಇದು ಆಟಗಾರರಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸುತ್ತಿದೆ’ ಎಂದು ಪಾಂಡ್ಯ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ