ಏಷ್ಯಾ ಕಪ್ ಗೂ ಕೆಎಲ್ ರಾಹುಲ್ ಅನುಮಾನ?
ಫಿಟ್ನೆಸ್ ಪಡೆಯದ ಕಾರಣಕ್ಕೆ ರಾಹುಲ್ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗುಳಿದಿದ್ದಾರೆ. ಆಗಸ್ಟ್ 27 ರಿಂದ ಏಷ್ಯಾ ಕಪ್ ಆರಂಭವಾಗಲಿದ್ದು, ಈ ಟೂರ್ನಿಯಗೂ ರಾಹುಲ್ ಲಭ್ಯರಾಗುವುದು ಅನುಮಾನ.
ಒಂದು ವೇಳೆ ರಾಹುಲ್ ಅಲಭ್ಯರಾದರೆ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಜೊತೆ ಅನುಭವಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ‍್ಯತೆಯಿದೆ. ಆದರೂ ಟಿ20 ಫಾರ್ಮ್ಯಾಟ್ ನ ಅದ್ಭುತ ಬ್ಯಾಟಿಗನಾಗಿರುವ ರಾಹುಲ್ ಅನುಪಸ್ಥಿತಿ ಭಾರತ ತಂಡವನ್ನು ಕಾಡಲಿದೆ.