ಅಹಮ್ಮದಾಬಾದ್ ಲಕ್ಕಿ ಮೈದಾನ ಎಂದು ಮತ್ತೆ ಪ್ರೂವ್ ಮಾಡಿದ ಹಾರ್ದಿಕ್ ಪಾಂಡ್ಯ
ಮೂರನೇ ಟಿ20 ಪಂದ್ಯ ಗೆಲ್ಲಲು ಭಾರತ ನೀಡಿದ್ದ 235 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 12.1 ಓವರ್ ಗಳಲ್ಲಿ 66 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 168 ರನ್ ಗಳ ಗೆಲುವು ಕಂಡ ಟೀಂ ಇಂಡಿಯಾ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತೀ ದೊಡ್ಡ ಗೆಲುವಿನ ಸಾಧನೆ ಮಾಡಿತು.
ಬ್ಯಾಟಿಂಗ್ ನಲ್ಲಿ ಮಿಂಚಿದ್ದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲೂ ಮಿಂಚಿ 4 ವಿಕೆಟ್ ಕಬಳಿಸಿದರು. ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ 35,ಮಿಚೆಲ್ ಸ್ಯಾಂಟ್ನರ್ 13 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಎರಡಂಕಿ ಮೊತ್ತವನ್ನೂ ತಲುಪಲಿಲ್ಲ. ಭಾರತದ ಪರ ಅರ್ಷ್ ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ ತಲಾ 2 ವಿಕೆಟ್ ಕಬಳಿಸಿದರು.