ನ್ಯೂಜಿಲೆಂಡ್ ವಿರುದ್ಧ ಮತ್ತೆ ಶುಬ್ಮನ್ ಗಿಲ್ ಅಬ್ಬರದ ಶತಕ
ಭಾರತದ ಇನಿಂಗ್ಸ್ ನ ಸಂಪೂರ್ಣ ಹೊಣೆ ಹೊತ್ತಿದ್ದು ಶುಬ್ಮನ್ ಗಿಲ್. ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ಗಿಲ್ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಕೊಂಚ ಮಂಕಾಗಿದ್ದರು. ಆದರೆ ಮೂರನೆ ಟಿ20 ಪಂದ್ಯದ ವೇಳೆ ಮತ್ತೆ ಲಯಕ್ಕೆ ಬಂದ ಗಿಲ್ ಕೇವಲ 63 ಎಸೆತಗಳಲ್ಲಿ 126 ರನ್ ಗಳಿಸಿ ಚೊಚ್ಚಲ ಟಿ20 ಶತಕ ಸಿಡಿಸಿದ ಸಾಧನೆ ಮಾಡಿದರು. ಇದರೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಐದನೇ ಆಟಗಾರನೆನಿಸಿಕೊಂಡರು.
ಇನ್ನೊಂದೆಡೆ ರಾಹುಲ್ ತ್ರಿಪಾಠಿ ಬಿರುಸಿನ 44, ಸೂರ್ಯಕುಮಾರ್ ಯಾದವ್ 23, ಹಾರ್ದಿಕ್ ಪಾಂಡ್ಯ 30 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 235 ರನ್ ಗಳ ಬೃಹತ್ ಮೊತ್ತ ನೀಡಿದೆ.