ಮುಂದುವರಿದ ಕೊಹ್ಲಿ ಟೆಂಪಲ್ ರನ್: 100 ಸ್ವಾಮೀಜಿಗಳಿಗೆ ವಿರಾಟ್ ದಂಪತಿ ಭೋಜನ ಸೇವೆ

ಬುಧವಾರ, 1 ಫೆಬ್ರವರಿ 2023 (09:19 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ  ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಈಗ ಋಷಿಕೇಶದಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.

ಕ್ರಿಕೆಟ್ ನಿಂದ ಬಿಡುವು ಸಿಕ್ಕಾಗ ಕೊಹ್ಲಿ ದಂಪತಿ, ಪುತ್ರಿ ಮವಿಕಾ ಸಮೇತ ಋಷಿಕೇಶದ ದಯಾನಂದ ಆಶ‍್ರಮಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕೊಹ್ಲಿ ದಂಪತಿ 100 ಸ್ವಾಮೀಜಿಗಳಿಗೆ ಭೋಜನ ಸೇವೆ ಮಾಡಿದ್ದಾರೆ. ಇತ್ತೀಚೆಗೆ ಕೊಹ್ಲಿ ದಂಪತಿ ಪದೇ ಪದೇ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ಸರಣಿಗೆ ಮೊದಲು ದೇವರ ಸೇವೆ ಸಲ್ಲಿಸಿದ್ದಾರೆ.

ಇದಾದ ಬಳಿಕ ಕೊಹ್ಲಿ ದಂಪತಿ ಈಗ ಇಲ್ಲಿನ ಪ್ರಕೃತಿ ಮಧ್ಯೆ ಟ್ರಕ್ಕಿಂಗ್ ನಡೆಸಿದ್ದು, ಮಗಳ ಜೊತೆ ಸುಂದರ ಕ್ಷಣ ಕಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ