ಮಹಿಳಾ ಟಿ20 ವಿಶ್ವಕಪ್: ಮೊದಲ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ ಹರ್ಮನ್ ಪ್ರೀತ್ ಕೌರ್

ಶನಿವಾರ, 10 ನವೆಂಬರ್ 2018 (09:50 IST)
ಗಯಾನ: ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ ಭಾರತ ಮಹಿಳಾ ತಂಡ ಮೊದಲ ಪಂದ್ಯದಲ್ಲೇ 34 ರನ್ ಗಳ ಗೆಲುವು ಸಾಧಿಸಿದೆ.
 

ನಾಯಕಿ ಹರ್ಮನ್ ಪ್ರೀತ್ ಕೌರ್ ಎಂದಿನಂತೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು, ಪಂದ್ಯದ ಆಕರ್ಷಣೆಯಾಗಿತ್ತು. ಹರ್ಮನ್ ಕೇವಲ 51 ಎಸೆತಗಳಲ್ಲಿ 8 ಸಿಕ್ಸರ್, 7 ಬೌಂಡರಿ ಸಹಿತ 103 ರನ್ ಗಳಿಸಿ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್ ನಲ್ಲಿ ಮೊದಲ ಶತಕ ಭಾರಿಸಿದ ಭಾರತೀಯ ಆಟಗಾರ್ತಿ ಎನಿಸಿದರು. ಅಲ್ಲದೆ, ಟಿ20 ಕ್ರಿಕೆಟ್ ನಲ್ಲಿ ಮೂರನೇ ಅತೀ ವೇಗದ ಶತಕ ಭಾರಿಸಿದ ವಿಶ್ವದಾಖಲೆ ಮಾಡಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ವನಿತೆಯರು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ