ಹೊಸ ದಾಖಲೆ ಮುರಿಯಲು ಸಜ್ಜಾಗಿರುವ ರೋಹಿತ್ ಶರ್ಮಾ
ಪ್ರಚಂಡ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಟಿ20 ಮಾದರಿಯಲ್ಲಿ ಗರಿಷ್ಠ ಶತಕ ಗಳಿಸಿದ ದಾಖಲೆ ಮಾಡಿದ್ದರು. ಇದೀಗ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಮಾಡುವ ಹಾದಿಯಲ್ಲಿದ್ದಾರೆ.
ಸದ್ಯಕ್ಕೆ ಟಿ20 ಕ್ರಿಕೆಟ್ ನಲ್ಲಿ ಒಟ್ಟು 2203 ರನ್ ಗಳಿಸಿರುವ ರೋಹಿತ್ ಇನ್ನು 69 ರನ್ ಗಳಿಸಿದರೆ ಈ ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ದಾಖಲೆ ಮುರಿದು ನಂ.1 ಆಗಲಿದ್ದಾರೆ. ಸದ್ಯದ ರೋಹಿತ್ ಫಾರ್ಮ್ ನೋಡಿದರೆ ಇದೇನೂ ಕಷ್ಟವಲ್ಲ ಬಿಡಿ.