ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯುವ ಆಟಗಾರ್ತಿಗೆ ನೀಡಿದ ಹರ್ಮನ್ ಪ್ರೀತ್ ಕೌರ್: ವಿಡಿಯೋ
ನಿನ್ನೆಯ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಶತಕ ದಾಖಲಿಸಿದ್ದರೆ ಕ್ರಾಂತಿ 6 ವಿಕೆಟ್ ಕಬಳಿಸಿ ಇಂಗ್ಲೆಂಡ್ ಬ್ಯಾಟಿಂಗ್ ಗೆ ಕಡಿವಾಣ ಹಾಕಿದರು. ಈ ಪಂದ್ಯವನ್ನು ಭಾರತ 13 ರನ್ ಗಳಿಂದ ಗೆದ್ದುಕೊಂಡಿತು. ಈ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು.
ಹರ್ಮನ್ ಪ್ರೀತ್ ಕೌರ್ ಪಂದ್ಯಶ್ರೇಷ್ಠ ಮಾತ್ರವಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಆದರೆ ಈ ಪಂದ್ಯದ ಗೆಲುವಿಗೆ ಕ್ರಾಂತಿ ಬೌಲಿಂಗ್ ಕೂಡಾ ಕಾರಣವಾಗಿತ್ತು. ಹೀಗಾಗಿ ಪಂದ್ಯದ ಬಳಿಕ ತನಗೆ ಸಿಕ್ಕ ಪ್ರಶಸ್ತಿಯನ್ನು ಹರ್ಮನ್ ಬೌಲರ್ ಕ್ರಾಂತಿಗೆ ನೀಡಿದ್ದಾರೆ.
ಈ ಪ್ರಶಸ್ತಿಗೆ ನನಗಿಂತ ನೀನೇ ಅರ್ಹಳು ಎಂದು ಪ್ರೀತಿಯಿಂದಲೇ ಹರ್ಮನ್ ಪ್ರಶಸ್ತಿಯನ್ನು ಕ್ರಾಂತಿ ಕೈಗೊಪ್ಪಿಸಿದಾಗ ಆಕೆ ಭಾವುಕರಾಗಿದ್ದಾರೆ. ಆಗ ಹರ್ಮನ್ ತಬ್ಬಿಕೊಂಡು ಆಕೆಯನ್ನು ಅಭಿನಂದಿಸಿದ್ದಾರೆ.