WPL 2025 Final: ಎರಡನೇ ಬಾರೀ ಕಿರೀಟಕ್ಕೆ ಮುತ್ತಿಕ್ಕಿದ ಮುಂಬೈ ಇಂಡಿಯನ್ಸ್ ವನಿತೆಯರು

Sampriya

ಶನಿವಾರ, 15 ಮಾರ್ಚ್ 2025 (23:28 IST)
Photo Courtesy X
ಬೆಂಗಳೂರು: ಡೆಲ್ಲಿ  ಕ್ಯಾಪಿಟಲ್ಸ್‌ ವಿರುದ್ಧ ಇಂದು ನಡೆದ ಡಬ್ಲ್ಯುಪಿಎಲ್‌ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಅಮೋಘ ಜಯ ಗಳಿಸಿದರು. ಮೂರನೇ ಬಾರೀ ಫೈನಲ್‌ ಪ್ರವೇಶಿಸಿದರು ಡೆಲ್ಲಿ ಕ್ಯಾಪಿಟಲ್ಸ್‌ ಚಾಂಪಿಯನ್‌ ಆಗಲು ಸಾಧ್ಯವಾಗಿಲ್ಲ. 2025ರ ಡಬ್ಲ್ಯುಪಿಎಲ್ ಕಿರೀಟವನ್ನು ಗೆಲ್ಲುವ ಮೂಲಕ ಎರಡನೇ ಬಾರೀ ಮುಂಬೈ ಇಂಡಿಯನ್ಸ್‌ ಡಬ್ಲ್ಯುಪಿಎಲ್‌ ಕಿರೀಟಕ್ಕೆ ಮುತ್ತಿಕ್ಕಿತು.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಮುಂಬೈ ಇಂಡಿಯನ್ಸ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮುಂಬೈ ಇಂಡಿಯನ್ಸ್‌ 20ಓವರ್‌ನಲ್ಲಿ 7ವಿಕೆಟ್‌ ಕಳೆದುಕೊಂಡು 149ರನ್‌ಗಳ ಟಾರ್ಗೆಟ್‌ ಅನ್ನು ಡೆಲ್ಲಿಗೆ ನೀಡಿತು.

ಗುರಿ ಬೆನ್ನಟ್ಟಿ ಉತ್ತಮ ಆರಂಭ ಶುರು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌  ಕೊನೆಯಲ್ಲಿ ಎಡವಿತು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್‌ನ ಮೂರು ವರ್ಷಗಳ ಕನಸು ಭಗ್ನವಾಯಿತು.  2023ರಲ್ಲಿ ಪ್ರಶಸ್ತಿ ಜಯಿಸಿದ್ದ ಮುಂಬೈ ತಂಡವು ಈಗ ಮತ್ತೊಮ್ಮೆ ಗೆಲುವಿನ ನಗೆ ಬೀರಿದೆ.  

2008ರಿಂದ ನಡೆಯುತ್ತಿರುವ ಐಪಿಎಲ್‌ನಲ್ಲಿ ಪುರುಷರ ತಂಡವು ಮತ್ತು ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಡಬ್ಲ್ಯುಪಿಎಲ್‌ನಲ್ಲಿ  ಡೆಲ್ಲಿ ಕ್ಯಾಪಿಟಲ್ಸ್‌  ಮಹಿಳೆಯರ ತಂಡವು ಪ್ರಶಸ್ತಿ ಗಳಿಸಿಲ್ಲ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ