ಪತಿಯಿಂದ ಪ್ರತಿ ತಿಂಗಳು 10 ಲಕ್ಷಕ್ಕೆ ಬೇಡಿಕೆಯಿಟ್ಟ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ!
ಮೊಹಮ್ಮದ್ ಶಮಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಬೇರೆ ಸ್ತ್ರೀಯರ ಸಹವಾಸ ಮಾಡಿದ್ದಾರೆ ಎಂದು ಹಸೀನ್ ಜಹಾನ್ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಇದೀಗ ತನಿಖೆ ಪ್ರಗತಿಯಲ್ಲಿದೆ.
ಇದೀಗ ಪತಿ ಮೊಹಮ್ಮದ್ ಶಮಿ ತನಗೆ ಕುಟುಂಬ ನಿರ್ವಹಣೆಗಾಗಿ ಪ್ರತೀ ತಿಂಗಳು 7 ಲಕ್ಷ ರೂ. ಮತ್ತು ಮಗುವಿನ ವೆಚ್ಚಕ್ಕಾಗಿ 3 ಲಕ್ಷ ರೂ. ನೀಡಬೇಕೆಂದು ಹಸೀನ್ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಇದನ್ನು ಇತ್ಯರ್ಥ ಮಾಡಬೇಕೆಂದು ಹಸೀನ್ ಪರ ವಕೀಲರು ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.