ಆರ್‌ಸಿಬಿ ತಂಡಕ್ಕೆ ಹ್ಯಾಟ್ರಿಕ್‌ ಸೋಲು: ತವರಿನಲ್ಲಿ ಸ್ಮತಿ ಬಳಗಕ್ಕೆ ಭಾರೀ ಮುಖಭಂಗ

Sampriya

ಶುಕ್ರವಾರ, 28 ಫೆಬ್ರವರಿ 2025 (01:50 IST)
Photo Courtesy X
ಬೆಂಗಳೂರು: ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುರುವಾರ ಮಹಿಳಾ ಪ್ರೀಮಿಯಲ್‌ ಲೀಗ್‌ನ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿದೆ.

ವಡೋದರಾ ಲೆಗ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಸ್ಮೃತಿ ಮಂದಾನ ಬಳಗವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಈ ಮೂಲಕ ತವರಿನಲ್ಲಿ ಭಾರೀ ಮುಖಭಂಗ ಅನುಭವಿಸಿದೆ.

ಮಹಿಳಾ ಪ್ರೀಮಿಯಲ್‌ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವು ಜೈಂಟ್ಸ್‌ ತಂಡವನ್ನು ಮಣಿಸಿತ್ತು. ಇದೀಗ ಆರ್‌ಸಿಬಿ ತಂಡವನ್ನು ಸೋಲಿಸುವ ಮೂಲಕ ಗುಜರಾತ್‌ ತಂಡ ಮುಯ್ಯಿ ತೀರಿಸಿಕೊಂಡಿದೆ.

ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಬೆಂಗಳೂರು ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 125 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡವು 16.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 126 ರನ್ ಗಳಿಸಿತು. ತಂಡದ ನಾಯಕಿ ಆ್ಯಷ್ಲೆ ಗಾರ್ಡನರ್ (58; 31ಎಸೆತ, 4X,6, 6X3) ಮಿಂಚಿ ಗೆಲುವಿನ ರೂವಾರಿಯಾದರು.

ಆಡಿರುವ ಐದು ಪಂದ್ಯಗಳಿಂದ 4 ಅಂಕ ಗಳಿಸಿರುವ ಆರ್‌ಸಿಬಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮೊದಲೆರಡು ಸ್ಥಾನದಲ್ಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ