ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೊನ್ನೆ ಸುತ್ತಿದ ಎಲ್ಲಿಸ್ ಪೆರ್ರಿ

Krishnaveni K

ಗುರುವಾರ, 27 ಫೆಬ್ರವರಿ 2025 (20:27 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಡಬ್ಲ್ಯುಪಿಎಲ್ 2025 ರ ಇಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಮೊದಲ ಬಾರಿಗೆ ಸೊನ್ನೆ ಸುತ್ತಿ ಬೇಡದ ದಾಖಲೆ ಬರೆದರು.

ಎಲ್ಲಿಸ್ ಪೆರ್ರಿ ಈ ಕಳೆದ ಎಲ್ಲಾ ಪಂದ್ಯಗಳಲ್ಲಿ ಆರ್ ಸಿಬಿ ಬ್ಯಾಟಿಂಗ್ ಗೆ ಬಲವಾಗಿದ್ದರು. ಅವರ ಇನಿಂಗ್ಸ್ ನಿಂದಾಗಿ ಎಲ್ಲಾ ಪಂದ್ಯಗಳಲ್ಲೂ ಆರ್ ಸಿಬಿ ಗೌರವಯುತ ಮೊತ್ತ ಕಲೆ ಹಾಕಿತ್ತು.

ಕಳೆದ ಪಂದ್ಯದಲ್ಲಿ ಪೆರ್ರಿ ಅಜೇಯ 90 ರನ್ ಸಿಡಿಸಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಒಟ್ಟು 4 ಎಸೆತ ಎದುರಿಸಿದ ಪೆರ್ರಿ ಶೂನ್ಯಕ್ಕೆ ನಿರ್ಗಮಿಸಿ ಡಬ್ಲ್ಯುಪಿಎಲ್ ಕೂಟದಲ್ಲಿ ಇದೇ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದರು.

ಇನ್ನು ನಾಯಕಿ ಸ್ಮೃತಿ ಮಂಧನ ಮತ್ತೊಮ್ಮೆ ವೈಫಲ್ಯಕ್ಕೀಡಾಗಿದ್ದು 20 ಎಸೆತ ಎದುರಿಸಿ ಕೇವಲ 10 ರನ್ ಗಳಿಸಿ ಔಟಾಗಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಆರ್ ಸಿಬಿ 11 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿ ಸಂಕಷ್ಟದಲ್ಲಿದೆ. ಇಂದು ಮತ್ತೊಮ್ಮೆ ಆರ್ ಸಿಬಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ