ಈ ಬಾರಿ ವದಂತಿಯಲ್ಲ! ಇಹಲೋಕ ತ್ಯಜಿಸಿದ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್
ಆದರೆ ಈ ಬಾರಿ ವದಂತಿಯಲ್ಲ. ಜಿಂಬಾಬ್ವೆಯ ಮಾಜಿ ಸ್ಟಾರ್ ಆಟಗಾರ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿಯನ್ನು ಕುಟುಂಬಸ್ಥರೇ ಖಚಿತಪಡಿಸಿದ್ದಾರೆ.
ಜಿಂಬಾಬ್ವೆ ಪರ 65 ಟೆಸ್ಟ್, 189 ಏಕದಿನ ಪಂದ್ಯವಾಡಿದ್ದ ಹೀತ್ ಸ್ಟ್ರೀಕ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದರು. ಜಿಂಬಾಬ್ವೆ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಅವರದ್ದಾಗಿದೆ. ಅವರ ನಿಧನಕ್ಕೆ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಸೇರಿದಂತೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.