ಬೊಕ್ಕ ತಲೆಗೆ ಟ್ರೀಟ್ ಮೆಂಟ್ ಮಾಡಿಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಶಮಿ
ಇತ್ತೀಚೆಗೆ ಶಮಿ ಕೂದಲು ಉದುರಿ ತಲೆ ಬೋಳಾಗುತ್ತಿತ್ತು. ಹೀಗಾಗಿ ಅವರು ಏಷ್ಯಾ ಕಪ್ ಗೆ ತೆರಳುವ ಮುನ್ನ ಕೂದಲು ಚಿಗುರಿಸಲು ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಪರಿಣಾಮ ಈಗ ನಿಧಾನವಾಗಿ ಹೊಸ ಕೂದಲು ಚಿಗುರುತ್ತಿದೆ. ಅವರ ಈ ಹೊಸ ಸ್ಟೈಲ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರ ಬೆನ್ನಲ್ಲೇ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅರ್ಜೆಂಟಾಗಿ ರೋಹಿತ್ ಶರ್ಮಾ ಕೂಡಾ ಈ ಟ್ರೀಟ್ ಮೆಂಟ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ರೋಹಿತ್ ಕೂಡಾ ಕೂದಲು ಉದುರಿ ಮುಜುಗರ ಅನುಭವಿಸುವುದಕ್ಕೆ ತಲೆಗೆ ಟೋಪಿ ಹಾಕಿಕೊಂಡೇ ಓಡಾಡುತ್ತಾರೆ. ಹೀಗಾಗಿ ನೆಟ್ಟಿಗರು ನೀವೂ ಈ ಚಿಕಿತ್ಸೆ ಪಡೆದುಕೊಳ್ಳಿ ಎಂದು ರೋಹಿತ್ ಗೂ ಸಲಹೆ ನೀಡಿದ್ದಾರೆ.