ಕೆಎಲ್ ರಾಹುಲ್ ಫಿಟ್: ಲಂಕಾಗೆ ಪ್ರಯಾಣಿಸಲಿರುವ ಕ್ರಿಕೆಟಿಗ
ಫಿಟ್ನೆಸ್ ಕೊರತೆಯಿಂದಾಗಿ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಈಗಾಗಲೇ ಬಿಸಿಸಿಐ ಪ್ರಕಟಿಸಿತ್ತು. ಇದೀಗ ಫಿಟ್ನೆಸ್ ಪರೀಕ್ಷೆಗೊಳಪಟ್ಟಿರುವ ರಾಹುಲ್ ಆಡಲು ಅರ್ಹ ಎಂದು ವೈದ್ಯಕೀಯ ತಂಡ ಖಚಿತಪಡಿಸಿದೆ.
ಈ ಹಿನ್ನಲೆಯಲ್ಲಿ ಅವರು ಲಂಕಾಗೆ ಪ್ರಯಾಣಿಸಲಿದ್ದಾರೆ. ಮೂರನೇ ಪಂದ್ಯದಿಂದ ಅವರು ತಂಡದ ಆಯ್ಕೆಗೆ ಲಭ‍್ಯರಿರಲಿದ್ದಾರೆ. ನಾಳೆಯ ಪಂದ್ಯದಲ್ಲಿ ಅವರು ಆಡುವುದಿಲ್ಲ.