ಭಾರತದ ವೇಗಿ ಇಶಾಂತ್ ಶರ್ಮಾ ಭಾನುವಾರ ಪ್ರತಿಮಾ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಜೀವನದ ಹೊಸ ಹಂತವನ್ನು ಪ್ರವೇಶಿಸಿದ್ದಾರೆ. ದೆಹಲಿ ವೇಗಿಗೆ ಎಲ್ಲಾ ಮೂಲೆಗಳಿಂದ ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದ್ದಂತೆ ರೋಹಿತ್ ಶರ್ಮಾ ಅವರಿಗೆ ನೆಗಯುಕ್ಕಿಸುವ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
''ವಿವಾಹಿತ ಕ್ರಿಕೆಟಿಗರ ಕ್ಲಬ್‌ಗೆ ಸ್ವಾಗತ, ಅಭಿನಂದನೆಗಳು, ಇವತ್ತಾದರೂ ತಲೆಕೂದಲು ಕಟ್ ಮಾಡಬೇಕಿತ್ತಲ್ಲಾ '' ಎಂದು ರೋಹಿತ್ ಇಶಾಂತ್ ಅವರಿಗೆ ಟ್ವೀಟ್ ಮಾಡಿದ್ದಾರೆ.
ವಿವಾಹಿತ ಕ್ರಿಕೆಟರುಗಳ ಪಟ್ಟಿಯಲ್ಲಿ ಇಶಾಂತ್ ಹೊಸ ಹೆಸರಾಗಿದ್ದು, ತಮ್ಮ ಗೆಳತಿ ಜತೆ ಉಂಗುರ ಬದಲಾಯಿಸಿಕೊಂಡರು. ದೆಹಲಿ ಕ್ರಿಕೆಟರ್ ಇಶಾಂತ ಜಿಂಬಾಬ್ವೆಗೆ ಪ್ರವಾಸ ಮಾಡುತ್ತಿರುವ ಭಾರತ ತಂಡದಲ್ಲಿ ಸೇರಿಲ್ಲ. ಅವರು 2016ರ ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಕೊನೆಯದಾಗಿ ಆಡಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ