ಸೂರ್ಯಕುಮಾರ್ ಯಾದವ್ ಸೇನೆಗೆ ನೀಡಲಿರುವ ಒಟ್ಟು ಹಣವೆಷ್ಟು ಗೊತ್ತಾ

Krishnaveni K

ಮಂಗಳವಾರ, 30 ಸೆಪ್ಟಂಬರ್ 2025 (14:12 IST)
ಮುಂಬೈ: ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳ ಶುಲ್ಕವನ್ನು ಭಾರತೀಯ ಸೇನೆ ಮತ್ತು ಪಹಲ್ಗಾಮ್ ಸಂತ್ರಸ್ತರಿಗೆ ನೀಡುವುದಾಗಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಘೋಷಿಸಿದ್ದಾರೆ. ಹಾಗಿದ್ದರೆ ಅವರು ಒಟ್ಟು ಎಷ್ಟು ಹಣ ನೀಡಲಿದ್ದಾರೆ ಗೊತ್ತಾ?

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಟಿ20, ಏಕದಿನ ಮತ್ತು ಟೆಸ್ಟ್ ಪಂದ್ಯಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಇಂತಿಷ್ಟು ಎಂದು ಸಂಭಾವನೆ ನಿಗದಿಯಾಗಿದೆ. ಟಿ20 ಕ್ರಿಕೆಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಒಂದು ಪಂದ್ಯಕ್ಕೆ 3 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಏಕದಿನ ಮಾದರಿಯ ಒಂದು ಪಂದ್ಯಕ್ಕೆ 6 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಟೆಸ್ಟ್ ಮಾದರಿಯ ಒಂದು ಪಂದ್ಯಕ್ಕೆ 15 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.

ಇದೀಗ ಸೂರ್ಯಕುಮಾರ್ ಯಾದವ್ ಈ ಏಷ್ಯಾ ಕಪ್ ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳನ್ನಾಡಿದ್ದಾರೆ. ಅಂದರೆ ಒಂದು ಪಂದ್ಯಕ್ಕೆ 3 ಲಕ್ಷ ರೂ.ಗಳಂತೆ ಎಂದರೂ 7 ಪಂದ್ಯಕ್ಕೆ ಒಟ್ಟು 21 ಲಕ್ಷ ರೂ.ಗಳ ಸಂಭಾವನೆ ಪಡೆಯಲಿದ್ದಾರೆ.

ಇದೀಗ ಅಷ್ಟೂ ಮೊತ್ತವನ್ನು ಅವರು ಭಾರತೀಯ ಸೇನೆ ಮತ್ತು ಪಹಲ್ಗಾಮ್ ಸಂತ್ರಸ್ತರಿಗೆ ಹಂಚಲಿದ್ದಾರೆ. ಇದು ದೊಡ್ಡ ಮೊತ್ತವೇ ಸರಿ. ಸೂರ್ಯಕುಮಾರ್ ಯಾದವ್ ರ ಈ ನಿರ್ಧಾರಕ್ಕೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ