ಇನ್ನೇನು ಸೋಲುತ್ತಿದ್ದ ಪಂದ್ಯವನ್ನು ದೀಪಕ್ ಚಹರ್ ತಾಳ್ಮೆಯ ಆಟವಾಡಿ ಗೆಲ್ಲಿಸಿದ್ದಕ್ಕೆ ದ್ರಾವಿಡ್ ನೀಡಿದ ಸಲಹೆ ಕಾರಣ ಎಂದು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ದೀಪಕ್ ಚಹರ್ ರಾಹುಲ್ ಸರ್ ನನ್ನಲ್ಲಿ ಪ್ರತೀ ಚೆಂಡನ್ನೂ ಆಡಲು ಹೇಳಿದರು. ನಾನು ಅವರು ಕೋಚ್ ಆಗಿ ಭಾರತ ಎ ತಂಡದ ಪರ ಆಡಿದ್ದೆ. ಹಾಗಾಗಿ ಅವರಿಗೆ ನನ್ನಲ್ಲಿ ನಂಬಿಕೆಯಿತ್ತು. ನಾನು ಏಳನೇ ಕ್ರಮಾಂಕದಲ್ಲಿ ಆಡಲು ಸಮರ್ಥ ಎಂದು ಅವರು ಹೇಳಿದರು. ಅವರ ನಂಬಿಕೆಯೇ ನನಗೆ ಸ್ಪೂರ್ತಿಯಾಯಿತು ಎಂದು ಚಹರ್ ಹೇಳಿದ್ದಾರೆ.