ಪಂದ್ಯ ಮುಗಿದ ಬಳಿ ಕೊಹ್ಲಿ ಬರ್ತ್ ಡೇ, ಜಡೇಜಾ ಫೈಫರ್ ಸೆಲೆಬ್ರೇಷನ್ ಹೇಗಿತ್ತು?

ಸೋಮವಾರ, 6 ನವೆಂಬರ್ 2023 (09:10 IST)
Photo Courtesy: Twitter
ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ನಿನ್ನೆ ದ.ಆಫ್ರಿಕಾ ವಿರುದ್ಧದ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ಸೆಲೆಬ್ರೇಷನ್ ಜೋರಾಗಿಯೇ ನಡೆದಿತ್ತು.

ನಿನ್ನೆ ವಿರಾಟ್ ಹುಟ್ಟುಹಬ್ಬದ ದಿನವೇ ಶತಕ ಸಿಡಿಸಿದ್ದರು. ಇನ್ನು, ರವೀಂದ್ರ ಜಡೇಜಾ ಐದು ವಿಕೆಟ್ ಕಬಳಿಸಿ ಯುವರಾಜ್ ಸಿಂಗ್ ಬಳಿಕ ಈ ಸಾಧನೆ ಮಾಡಿದ ಮತ್ತೊಬ್ಬ ಸ್ಪಿನ್ನರ್ ಎನಿಸಿಕೊಂಡರು.

ಈ ಕಾರಣಕ್ಕೆ ಬಿಸಿಸಿಐ ಈ ಇಬ್ಬರೂ ಆಟಗಾರರಿಗೆ ಕೇಕ್ ಕಟ್ಟಿಂಗ್ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಕೂಡಾ ಇದ್ದರು. ಹೋಟೆಲ್ ನಲ್ಲಿ ಕೊಹ್ಲಿ ಮತ್ತು ಜಡೇಜಾರಿಂದ ಪ್ರತ್ಯೇಕ ಕೇಕ್ ಕಟ್ ಮಾಡಿಸಲಾಯಿತು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ