ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ 9ನೇ ಆವೃತ್ತಿಯಲ್ಲಿ 3 ಶತಕಗಳೊಂದಿಗೆ ಅಬ್ಬರಿಸಿದ್ದು, ಸಿಕ್ಸರುಗಳನ್ನು ಹೊಡೆಯುವ ತನ್ನ ಸಾಮರ್ಥ್ಯದ ಬಗ್ಗೆ ತಮಗೆ ಹೆಚ್ಚು ನಂಬಿಕೆ ಬರುತ್ತಿರುವುದಾಗಿ ತಿಳಿಸಿದರು. ಕೊಹ್ಲಿ ಇಲ್ಲಿಯವರೆಗೆ 677 ರನ್‌ಗಳಲ್ಲಿ 25 ಸಿಕ್ಸರುಗಳನ್ನು ಸಿಡಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅವರ ಸಿಕ್ಸರ್ ಹಸಿವು ಮತ್ತಷ್ಟು ಹೆಚ್ಚುವಂತೆ ಕಂಡುಬಂದಿದ್ದಾರೆ.
ಮೊದಲ 20-25 ಎಸೆತಗಳಲ್ಲಿ ಚೆಂಡಿಗೊಂದು ರನ್ ತೆಗೆದರೆ ಚಿಂತೆಯಿಲ್ಲ. ಏಕೆಂದರೆ ಮುಂದಿನ 15 ಎಸೆತಗಳಲ್ಲಿ 40-45 ರನ್‌ಗಳನ್ನು ಗಳಿಸಬಲ್ಲೆ. ಈಗ ಅಂತಿಮ ಓವರುಗಳಲ್ಲಿ ಸಿಕ್ಸರುಗಳನ್ನು ಸಿಡಿಸುವ ಮತ್ತು ಗ್ಯಾಪ್‌ನಲ್ಲಿ ಬೌಂಡರಿಗಳನ್ನು ಚಚ್ಚುವ ಸಾಮರ್ಥ್ಯದ ಬಗ್ಗೆ ಹೆಚ್ಚು ನಂಬಿಕೆ ಇರಿಸಿದ್ದೇನೆ ಎಂದು ಗುಜರಾತ್ ಲಯನ್ಸ್ ವಿರುದ್ಧ 8ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಕೊಹ್ಲಿ ಹೇಳಿದ್ದಾರೆ.