ICC Champion Trophy: ಭಾರತಕ್ಕೆ ಸದಾ ತಲೆನೋವಾಗಿದ್ದ ಟ್ರಾವಿಸ್ ಹೆಡ್‌ಗೆ ಪೆವಿಲಿಯನ್ ದಾರಿ ತೋರಿದ ವರುಣ್‌

Sampriya

ಮಂಗಳವಾರ, 4 ಮಾರ್ಚ್ 2025 (15:28 IST)
Photo Courtesy X
ಬೆಂಗಳೂರು: ಐಸಿಸಿ ಟೋರ್ನಿಗಳಲ್ಲಿ ಭಾರತಕ್ಕೆ ಸದಾ ತಲೆನೋವಾಗಿ ಕಾಡುತ್ತಿದ್ದ ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಈ ಬಾರಿ ಭಾರತದ ಯುವ ಸ್ಪಿನರ್ ವರುಣ್ ಚಕ್ರವರ್ತಿ ಬೇಗ ಔಟ್ ಮಾಡಿದರು.

ಐಸಿಸಿ ಚಾಂಪಿಯನ್ ಟ್ರೋಪಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದು, ಭಾರತವನ್ನು ಫೀಲ್ಡಿಂಗ್‌ಗೆ ಆಹ್ವಾನಿಸಿದೆ.

ಐಸಿಸಿ ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದಾಗ ಟ್ರಾವಿಸ್ ಹೆಡ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ, ಭಾರತದ ಕೈಯಿದ್ದ ಗೆಲುವನ್ನು ಕಸಿದುಕೊಂಡಿದ್ದರು.

ಈ ಬಾರಿಯೂ ಭಾರತಕ್ಕೆ ತಲೆನೋವಾಗು ಲಕ್ಷಣ ಮೂಡಿಸಿದ್ದರು. ಆದರೆ 33ಬಾಲ್‌ಗಳಲ್ಲಿ  39ರನ್ ಗಳಿಸಿದ ಟ್ರಾವಿಸ್ ಹೆಡ್‌, ವರುಣ್ ಚಕ್ರವರ್ತಿ ಬೌಲಿಂಗ್ ವೇಳೆ ಶುಭಮನ್ ಗಿಲ್‌ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್‌ ಸೇರಿದರು.

ಮೊದಲ ಓವರ್‌ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಅವರಿಂದ ಜೀವದಾನ ಪಡೆದಿದ್ದ ಹೆಡ್‌, ನಂತರ ರನ್‌ ಔಟ್‌ನಿಂದಲೂ ಬಚಾವ್‌ ಆಗಿದ್ದರು. ಆದರೆ ವರುಣ್ ಚಕ್ರವರ್ತಿಯ ಸ್ಪಿನ್ ಬಲೆಗೆ ಬಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ