ಹೊಸದಿಲ್ಲಿ: ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಮುಖಾಮುಖಿಯ ವೇಳೆ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಪಾಕ್‌ನ ಮಾಜಿ ಕ್ಯಾಪ್ಟನ್ ಬಾಬರ್ ಅಜಮ್ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಸ್ ಗೆದ್ದ ಪಾಕ್‌ನ ನಾಯಕ ಮೊಹಮ್ಮದ್ ರಿಜ್ವಾನ್ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಾಬರ್ ಮತ್ತು ಇಮಾಮ್-ಉಲ್-ಹಕ್ ಅವರು ಪಾಕಿಸ್ತಾನ ಇನ್ನಿಂಗ್ಸ್ ಆರಂಭಿಸಲು ಕ್ರೀಸ್‌ಗೆ ಬಂದರು. ಈ ವೇಳೆ ಭಾರತದ ಸ್ಟಾರ್ ಬ್ಯಾಟರ್ ಮತ್ತು ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಮುಖಾಮುಖಿಯಾಗಿ, ಶುಭಶಾಯ ವಿನಿಮೀಯ ಮಾಡಿಕೊಂಡರು.
ಈ ವೇಳೆ ಕೊಹ್ಲಿ ಅವರು ಬಾಬರ್ ಅವರ ಬೆನ್ನು ತಟ್ಟಿ, ಹುರಿದಂಬಿಸಿದರು. ಜೊತೆಗೆ ಇನ್ನಿಂಗ್ಸ್ ತೆರೆಯಲು ಹೊರನಡೆದಾಗ, ಅವರನ್ನು ಕೊಹ್ಲಿ ಬೆಚ್ಚಗಿನ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. ಇಬ್ಬರು ಬ್ಯಾಟಿಂಗ್ ಐಕಾನ್‌ಗಳ ನಡುವಿನ ಕ್ರೀಡಾ ಮನೋಭಾವದ ಗೆಸ್ಚರ್ ತ್ವರಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಭಾರತ ಮತ್ತು ಪಾಕಿಸ್ತಾನ ನಡುವೆ ಐಸಿಸಿ ಚಾಂಪಿಯನ್ ಟ್ರೋಫಿ ಪಂದ್ಯ ನಡೆಯುತ್ತಿದ್ದು, ಪಾಕಿಸ್ತಾನಕ್ಕೆ ಇದು ನಿರ್ಣಾಯಕ ಪಂದ್ಯವಾಗಿದೆ.