ಟಿ20 ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ

ಮಂಗಳವಾರ, 5 ನವೆಂಬರ್ 2019 (09:17 IST)
ದುಬೈ: ಮುಂದಿನ ವರ್ಷ ಅಕ್ಟೋಬರ್-ನವಂಬರ್ ಅವಧಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ.


ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ಅಕ್ಟೋಬರ್ 24 ರಿಂದ ಅಧಿಕೃತವಾಗಿ ಪಂದ್ಯಾವಳಿ ಆರಂಭವಾಗಲಿದೆ. ಇದಕ್ಕೂ ಮೊದಲು ಅರ್ಹತಾ ಪಂದ್ಯಗಳು ನಡೆಯಲಿವೆ. ಆದರೆ ಟೀಂ ಇಂಡಿಯಾದಂತಹ ಘಟಾನುಘಟಿ ತಂಡಗಳಿಗೆ ಅರ್ಹತಾ ಪಂದ್ಯವಾಡಬೇಕಿಲ್ಲ.

ಭಾರತಕ್ಕೆ ಮೊದಲ ಪಂದ್ಯ ಅಕ್ಟೋಬರ್ 24 ರಂದು ಪರ್ತ್ ನಲ್ಲಿ ದ.ಆಫ್ರಿಕಾ ವಿರುದ್ಧ ನಿಗದಿಯಾಗಿದೆ. ಅಕ್ಟೋಬರ್ 29 ರಂದು ಮೆಲ್ಬೋರ್ನ್ ನಲ್ಲಿ (ಎದುರಾಳಿ ತೀರ್ಮಾನವಾಗಿಲ್ಲ), ನವಂಬರ್ 1 ರಂದು ಇಲ್ಲಿಯೇ ಇಂಗ್ಲೆಂಡ್ ವಿರುದ್ಧ, ನವಂಬರ್ 5 ರಂದು ಅಡಿಲೇಡ್ ನಲ್ಲಿ (ಎದುರಾಳಿ ತೀರ್ಮಾನವಾಗಿಲ್ಲ) ಮತ್ತು ನವಂಬರ್ 8 ರಂದು ಅಫ್ಘಾನಿಸ್ತಾನ ವಿರುದ್ಧ ಸಿಡ್ನಿಯಲ್ಲಿ ಭಾರತಕ್ಕೆ ಪಂದ್ಯ ನಿಗದಿಯಾಗಿದೆ. ಇದಾದ ಬಳಿಕ ಸೆಮಿಫೈನಲ್ ಮತ್ತು ಫೈನಲ್ ಹಂತದ ಪಂದ್ಯಗಳು ನಡೆಯಲಿವೆ.

ಒಟ್ಟು 16 ದೇಶಗಳ ತಂಡಗಳು ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲಿವೆ. ಪಪುವಾ ನ್ಯೂ ಜೆನಿವಾ, ಐರ್ಲೆಂಡ್, ಒಮನ್ ನೆದರ್ಲ್ಯಾಂಡ್ಸ್, ನಮೀಬಿಯಾ, ಸ್ಕಾಟ್ ಲ್ಯಾಂಡ್ ತಂಡಗಳೂ ಟೂರ್ನಮೆಂಟ್ ನಲ್ಲಿ ಭಾಗಿಯಾಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ