ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ ನಾಯಕ ರೋಹಿತ್ ಶರ್ಮಾ ಮಾತ್ರ ದಾಖಲೆಯೊಂದನ್ನು ಮಿಸ್ ಮಾಡಿಕೊಳ್ಳಲಿಲ್ಲ.
ಟಿ20 ಪುರುಷರ ಕ್ರಿಕೆಟ್ ಇತಿಹಾಸದಲ್ಲೇ ಇದು 1000 ನೇ ಪಂದ್ಯವಾಗಿತ್ತು ಎಂಬುದು ವಿಶೇಷ. ಇದು ರೋಹಿತ್ ಶರ್ಮಾ ಪಾಲಿಗೆ 99 ನೇ ಟಿ20 ಪಂದ್ಯವಾಗಿತ್ತು. ಈ ಮೂಲಕ ಅತ್ಯಧಿಕ ಟಿ20 ಪಂದ್ಯವಾಡಿದ ಭಾರತೀಯರ ಪೈಕಿ ರೋಹಿತ್ ಅಗ್ರ ಸ್ಥಾನಿಯಾದರು. ಇದಕ್ಕೂ ಮೊದಲು ಈ ದಾಖಲೆ 98 ಪಂದ್ಯಗಳಾಡಿದ್ದ ಧೋನಿ ಹೆಸರಲ್ಲಿತ್ತು.
ಜಾಗತಿಕವಾಗಿ ಅತ್ಯಧಿಕ ಟಿ20 ಪಂದ್ಯವಾಡಿದ ದಾಖಲೆ ಪಾಕಿಸ್ತಾನದ ಶೊಯೇಬ್ ಮಲಿಕ್ ಹೆಸರಲ್ಲಿದೆ. ಅವರು 111 ಟಿ20 ಪಂದ್ಯವಾಡಿದ್ದಾರೆ. ಇದೀಗ ರೋಹಿತ್ ಶರ್ಮಾ ಶಾಹಿದ್ ಅಫ್ರಿದಿ ಜತೆಗೆ 99 ಪಂದ್ಯಗಳೊಂದಿಗೆ ಜಂಟಿಯಾಗಿ ದ್ವಿತೀಯ ಸ್ಥಾನಿಯಾದರು.