ಐಸಿಸಿ ಟಿ20 ವಿಶ್ವಕಪ್ 2022: ಟೀಂ ಇಂಡಿಯಾ-ಪಾಕಿಸ್ತಾನ ಮೊದಲ ಪಂದ್ಯ

ಶುಕ್ರವಾರ, 21 ಜನವರಿ 2022 (10:53 IST)
ದುಬೈ: 2022 ರ ಐಸಿಸಿ ಟಿ20 ವಿಶ್ವಕಪ್ ಕೂಟದ ವೇಳಾಪಟ್ಟಿ ಪ್ರಕಟವಾಗಿದ್ದು, ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೂರ್ನಮೆಂಟ್ ಅಕ್ಟೋಬರ್ 16 ರಿಂದ ನವಂಬರ್ 13 ರವರೆಗೆ ನಡೆಯಲಿದೆ. ಮೊದಲ ಪಂದ್ಯದಲ್ಲಿ ಅ.22 ರಂದು ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ.

ಭಾರತಕ್ಕೆ ಮೊದಲ ಪಂದ್ಯ ಪಾಕ್ ವಿರುದ್ಧ ಅಕ್ಟೋಬರ್ 23 ರಂದು ನಡೆಯಲಿದ್ದು, ಈ ಹೈ ವೋಲ್ಟೇಜ್ ಪಂದ್ಯ ಎಂಸಿಜಿ ಮೈದಾನದಲ್ಲಿದೆ ನಡೆಯಲಿದೆ. ಕಳೆದ ವಿಶ್ವಕಪ್ ನಲ್ಲೂ ಭಾರತಕ್ಕೆ ಮೊದಲ ಪಂದ್ಯದಲ್ಲಿ ಪಾಕ್ ಎದುರಾಳಿಯಾಗಿತ್ತು. ಈ ಪಂದ್ಯವನ್ನು ಸೋತು ಭಾರತ ಮುಖಭಂಗ ಅನುಭವಿಸಿತ್ತು. ಆದರೆ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಈಗ ಮತ್ತೊಂದು ಅವಕಾಶ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ