ಐಸಿಸಿ ಏಕದಿನ ತಂಡದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಸ್ಥಾನವೇ ಇಲ್ಲ

ಗುರುವಾರ, 20 ಜನವರಿ 2022 (16:43 IST)
ದುಬೈ: 2021 ನೇ ಸಾಲಿನ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಟೀಂ ಇಂಡಿಯಾದ ಒಬ್ಬನೇ ಒಬ್ಬ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ. ಆದರೆ ಮಹಿಳೆಯರ ತಂಡದಲ್ಲಿ ಭಾರತದ ಜೂಲಾನ್ ಗೋಸ್ವಾಮಿ, ಮಿಥಾಲಿ ರಾಜ್ ಸ್ಥಾನ ಪಡೆದಿದ್ದಾರೆ.

ಪುರುಷರ ತಂಡಕ್ಕೆ ಪಾಕಿಸ್ತಾನದ ಬಾಬರ್ ಅಜಮ್ ನಾಯಕರಾಗಿದ್ದಾರೆ. ವಿಶೇಷವೆಂದರೆ ಬಾಂಗ್ಲಾದೇಶದ ಮೂವರು, ಐರ್ಲೆಂಡ್ ತಂಡದ ಇಬ್ಬರಿಗೂ ಸ್ಥಾನ ನೀಡಲಾಗಿದೆ. ಆದರೆ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡದ ಆಟಗಾರರಿಗೆ ಮಾತ್ರ ಸ್ಥಾನವೇ ನೀಡಿಲ್ಲ.

ಆದರೆ ಮಹಿಳೆಯರ ತಂಡದಲ್ಲಿ ಭಾರತದ ಸ್ಟಾರ್ ಬ್ಯಾಟಿಗ ಮಿಥಾಲಿ ರಾಜ್, ಹಾಗೂ ಸ್ಟಾರ್ ವೇಗಿ ಜೂಲಾನ್ ಗೋಸ್ವಾಮಿಗೆ ಸ್ಥಾನ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ