ಐಸಿಸಿ ಟಿ20 ವಿಶ್ವಕಪ್ 2020 ರ ವೇಳಾಪಟ್ಟಿ ಪ್ರಕಟ: ವಿವರ ಇಲ್ಲಿದೆ ನೋಡಿ
ಮಂಗಳವಾರ, 29 ಜನವರಿ 2019 (10:52 IST)
ದುಬೈ: ಐಸಿಸಿ 2020 ರ ಟಿ20 ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟದ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ. ಪುರುಷ ಮತ್ತು ಮಹಿಳೆಯರ ಟಿ20 ವಿಶ್ವಕಪ್ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟಗೊಂಡಿದೆ.
ಆಸ್ಟ್ರೇಲಿಯಾದಲ್ಲಿ ಸುಮಾರು 13 ಸ್ಥಳಗಳಲ್ಲಿ ಪಂದ್ಯ ನಡೆಯಲಿದ್ದು, ತಂಡಗಳನ್ನು ಎರಡು ಗುಂಪುಗಳಾಗಿ ಮಾಡಲಾಗಿದೆ. 2020 ರ ಅಕ್ಟೋಬರ್ 18 ರಿಂದ 23 ರವರೆಗೆ ಮೊದಲ ಸುತ್ತಿನ ಪಂದ್ಯಗಳು ನಡೆಯಲಿದ್ದು, ಬಳಿಕ ದ್ವಿತೀಯ ಸುತ್ತಿನ ಸೂಪರ್ 12 ಪಂದ್ಯಗಳು ಅಕ್ಟೋಬರ್ 24 ರಿಂದ ನವಂಬರ್ 8 ರವರೆಗೆ ನಡೆಯಲಿದೆ.
ಗ್ರೂಪ್ ಎ ತಂಡಗಳು
ಪಾಕಿಸ್ತಾನ
ಆಸ್ಟ್ರೇಲಿಯಾ
ವೆಸ್ಟ್ ಇಂಡೀಸ್
ನ್ಯೂಜಿಲೆಂಡ್
ಫಸ್ಟ್ ರೌಂಡ್ ಗ್ರೂಪ್ ಎ ಟೀಂ 1
ಫಸ್ಟ್ ರೌಂಡ್ ಗ್ರೂಪ್ ಬಿ ಟೀಂ 2
ಗ್ರೂಪ್ ಬಿ ತಂಡಗಳು
ಭಾರತ
ದ.ಆಫ್ರಿಕಾ
ಇಂಗ್ಲೆಂಡ್
ಅಫ್ಘಾನಿಸ್ತಾನ
ಫಸ್ಟ್ ರೌಂಡ್ ಗ್ರೂಪ್ ಬಿ ಟೀಂ 1
ಫಸ್ಟ್ ರೌಂಡ್ ಗ್ರೂಪ್ ಎ ಟೀಂ 2
ಭಾರತಕ್ಕೆ ಮೊದಲ ಪಂದ್ಯ ಪರ್ತ್ ನಲ್ಲಿ ಅಕ್ಟೋಬರ್ 24 ರಂದು ದ.ಆಫ್ರಿಕಾ ವಿರುದ್ಧ ನಡೆಯಲಿದೆ. ಫೈನಲ್ ಪಂದ್ಯ ನವಂಬರ್ 15 ರಂದು ಎಂಸಿಜಿ ಮೈದಾನದಲ್ಲಿ ನಡೆಯಲಿದೆ. ಮಹಿಳೆಯರ ಟಿ20 ವಿಶ್ವಕಪ್ ಟೂರ್ನಮೆಂಟ್ ಫೆಬ್ರವರಿ 21 ರಿಂದ ಮಾರ್ಚ್ 8 ರವರೆಗೆ ನಡೆಯಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ಇರುವ ಎ ಗುಂಪಿನಲ್ಲಿ ಭಾರತ ಮಹಿಳಾ ತಂಡ ಸ್ಥಾನ ಪಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ