ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ ಪುಡಿಗಟ್ಟಿದ ದಾಖಲೆಗಳಿವು
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿ 63 ಏಕದಿನ ಪಂದ್ಯಕ್ಕೆ ನೇತೃತ್ವ ವಹಿಸಿದ ಬಳಿಕ ಅತೀ ಹೆಚ್ಚು ಗೆಲುವು ದಾಖಲಿಸಿದ ವಿಶ್ವದ ಎರಡನೇ ನಾಯಕರಾದರು. ಕೊಹ್ಲಿ ಈಗ 47 ಗೆಲುವಿನ ದಾಖಲೆ ಹೊಂದಿದ್ದಾರೆ. 50 ಗೆಲುವು ಸಾಧಿಸಿದ ವಿಂಡೀಸ್ ಕ್ಲೈವ್ ಲಾಯ್ಡ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳಿದ್ದು, ಭಾರತ ಕ್ಲೀನ್ ಸ್ವೀಪ್ ಮಾಡಿದರೆ ಇತಿಹಾಸ ನಿರ್ಮಾಣವಾಗಲಿದೆ.